ಪಿಎಸ್ಐ ನೇಮಕಾತಿ ಅಕ್ರಮ: ಇನ್ನೋರ್ವ ಪ್ರಮುಖ ಆರೋಪಿ ಪತ್ತೆಗೆ 2 ತಂಡ ರಚನೆ ಮಾಡಿದ ಸಿಐಡಿ!

ಹೊಸದಿಗಂತ ವರದಿ, ಕಲಬುರಗಿ:

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಇನ್ನೊಬ್ಬ ಪ್ರಮುಖ ಆರೋಪಿ ಇಂಜಿನಿಯರ್ ಮಂಜುನಾಥ ಮೇಳಕುಂದಿ ನಾಪತ್ತೆ ಆಗಿದ್ದು, ಇತನ ಬಂಧನಕ್ಕೆ ಈಗಾಗಲೇ 2 ತಂಡಗಳನ್ನು ಮಾಡಿಕೊಂಡು ಶೋಧನೆ ಕಾಯ೯ ಮುಂದುವರೆಸಿದೆ.

ಮಂಜುನಾಥ್ ಮೇಳಕುಂದಿ ದಿವ್ಯಾ ಹಾಗರಗಿ ಒಡೆತನದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಮ್ಮ ಅಭ್ಯರ್ಥಿಗಳ ಮತ್ತು ಹಲವು ಅಭ್ಯರ್ಥಿಗಳ ಪರೀಕ್ಷೆಯನ್ನು ಬರೆದಿದ್ದನು ಎಂದು ತಿಳಿದುಬಂದಿದೆ.

ಈ ಹಿಂದೆ ಬ್ಲೂಟೂತ್ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ದೂರೂ ದಾಖಲಾಗಿತ್ತು.ಕಳೆದ ಎರಡು ವಾರದಿಂದ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ನಾಪತ್ತೆಯಾಗಿದ್ದು, ಇತನ ಬಂಧನಕ್ಕೆ ಸಿಐಡಿ ಬಲೆ ಬೀಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!