ಹೊಸದಿಗಂತ ವರದಿ,ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆ ಮುಂದುವರೆಸಿರುವ ಸಿಐಡಿ ಪೊಲೀಸ್ ರು ಕಾಂಗ್ರೆಸ್ಫ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಪ್ತ ಹಾಗೂ ಅಫಜಲಪುರ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ್ ಸೊನ್ನ ಎಂಬುವವರನ್ನು ಶುಕ್ರವಾರ ಬಂಧಿಸಲಾಗಿದೆ.
ನಿನ್ನೆಯಷ್ಟೇ ಅಫಜಲಪುರ ಶಾಸಕ ಗನ್ ಮ್ಯಾನ್ ಬಂಧಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಇಬ್ಬರನ್ನು ಬಂಧಿಸಲಾಗಿದೆ. ಈ ಮೂಲಕ ಒಟ್ಟು 12 ಜನರು ಬಂಧಿತರಾಗಿದ್ದಾರೆ.
ಅಫಜಲಪುರದಲ್ಲಿ ಬಂಧಿಸಿ ಸಿಐಡಿ ಅಧಿಕಾರಿಗಳು ನಗರಕ್ಕೆ ಕರೆ ತಂದು ವಿಚಾರಣೆ ಕೈಗೊಂಡಿದ್ದಾರೆ. ಬಂಧನಕ್ಕೆ ಸಹಕರಿಸಿದ್ದರಿಂದ
ಮಹಾಂತೇಶ್ ಪಾಟೀಲ್ ಕುತ್ತಿಗೆ ಪಟ್ಟಿ ಹಿಡಿದು ಎಳೆದುಕೊಂಡ ಹೋದ ಸಿಐಡಿ ಅಧಿಕಾರಿಗಳು
ಬಂಧನದ ವೇಳೆ ಹೈ ಡ್ರಾಮ್:
ಸಿಐಡಿ ಅಧಿಕಾರಿಗಳ ಬಂಧನಕ್ಕೆ ಮಹಾಂತೇಶ್ ಪಾಟೀಲ್ ಬೆಂಬಲಿಗರು ಅಡ್ಡಿಪಡಿಸಿದ ಪ್ರಸಂಗವೂ ನಡೆದಿದೆ. ಏ. 23 ರಂದು ಅಫಜಲಪುರದಲ್ಲಿ ಮಹಾಂತೇಶ ಪಾಟೀಲ್ ಹಾಗೂ ಸಹೋದರ ಆರ್. ಡಿ.ಪಾಟೀಲ 101 ಉಚಿತ ವಿವಾಹ ಮಹೋತ್ಸವ ಆಯೋಜಿಸಿದ್ದರು.ಅದರ ಸಿದ್ದತೆಯನ್ನು ಅವಲೋಕಿಸುತ್ತಿದ್ದಾಗ ಪೊಲೀಸ್ ರು ಬಂಧಿಸಿದ್ದಾರೆ.