ಬಾಕ್ಸ್ ಆಫೀಸ್‌ ನಲ್ಲಿ ಕೆಜಿಎಫ್ ಚಾಪ್ಟರ್ 2 ಅಬ್ಬರ: ಒಂದೇ ವಾರದಲ್ಲಿ ಗಳಿಸಿದೆಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ , ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ ಸೌಂಡ್ ಮಾಡುತ್ತಿದೆ. ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಬಾಕ್ಸ್ ಆಫೀಸ್‌ನಲ್ಲೂ ವಿಶೇಷ ದಾಖಲೆ ಬರೆಯುತ್ತಿದೆ.
ಏಪ್ರಿಲ್ 14ರಂದು 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ, ನಿನ್ನೆಗೆ ಒಂದು ವಾರದ ಯಶಸ್ವಿ ಪ್ರದರ್ಶನವಾಗಿದೆ. ಈ ಸಿನಿಮಾ ವಿಶ್ವಾದ್ಯಂತ 800 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಮಾಹಿತಿ ನೀಡಿದೆ.
ಈ ಹಿಂದೆ ಸಂಸ್ಥೆ ಹೇಳಿದಂತೆ ವಿದೇಶ ಹೊರತುಪಡಿಸಿ ಭಾರತದಲ್ಲೇ ಮೊದಲನೇ ದಿನ 134.5 ಕೋಟಿ, ಎರಡನೇ ದಿನ ಭಾರತದಲ್ಲಿ 240 ಕೋಟಿ ಸಂಪಾದಿಸಿತ್ತು. ನಾಲ್ಕನೇ ದಿನದಲ್ಲಿ ವಿಶ್ವಾದ್ಯಂತ 540 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿತ್ತು.
ಈಗ ಎಂಟು ದಿನಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ 800 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಸಾವಿರ ಕೋಟಿಯ ಗಡಿ ತಲುಪುತ್ತಿದೆ. ದಕ್ಷಿಣ ಭಾರತದಲ್ಲಿ ಒಂದೂವರೆ ಕೋಟಿಗೂ ಅಧಿಕ ಜನ ಒಂದು ವಾರದಲ್ಲಿ ಈ ಸಿನಿಮಾ‌ ನೋಡಿದ್ದಾರೆ. ಕರ್ನಾಟಕದಲ್ಲಿ 40 ಲಕ್ಷ ಜನ, ತೆಲುಗಿನಲ್ಲಿ 50 ಲಕ್ಷ ಜನ,‌ ತಮಿಳುನಾಡಿನಲ್ಲಿ 30 ಲಕ್ಷ ಜನ, ‌ಕೇರಳದಲ್ಲಿ 25 ಲಕ್ಷ ಜನ ಸಿನಿಮಾ ವೀಕ್ಷಿಸಿದ್ದಾರೆ ಎನ್ನುವ ಮಾಹಿತಿ ದೊರಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!