ಪಿಎಸ್ಐ ಹಗರಣದ ಸುಳಿವು ಮೊದಲೇ ಸಿಕ್ಕಿತ್ತು: ಭಾಸ್ಕರ ರಾವ್ ಹೊಸ ‘ಬಾಂಬ್’!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಬಂಧಿಸಲು ಕಾರಣವಾಗಿದ್ದ ಪಿಎಸ್ಐ ಹಗರಣದ ಕುರಿತು ನನಗೆ ಮೊದಲೇ ವಾಸನೆ ಇತ್ತು ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ.

ಉಡುಪಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬೆಂಗಳೂರು ಸಿಟಿ ಪೋಲಿಸ್ ಕಮಿಷನರ್ ಆಗಿರುವಾಗ ಅಮೃತ್ ಪೌಲ್ ಕಮಿಷನರ್ ಆಗುತ್ತಾರೆ ಎಂಬ ಸುದ್ದಿ ಪ್ರಚಲಿತದಲ್ಲಿತ್ತು. ಅಮೃತ್ ಪೌಲ್ ಆಗಾಗಾ ಮುಖ್ಯಮಂತ್ರಿಯವರ ಮನೆಗೆ ಬರುವುದನ್ನು ನಾನು ಗಮನಿಸಿದ್ದೆ.

ಆಗಲೇ ಇದು ಹಗರಣ ಎಂಬುವುದಾಗಿ ನನಗೆ ಮೊದಲೇ ಗೊತ್ತಿತ್ತು. ರಾಜ್ಯಪಾಲರ ಬಳಿ ಈ ವಿಷಯ ಕೊಂಡೊಯ್ದ ಮೊದಲ ರಾಜಕೀಯ ಪಕ್ಷ ಆಮ್ ಆದ್ಮಿ. ತನಿಖೆ ಆಗುವವರೆಗೂ ಪರೀಕ್ಷೆ ಮಾಡುವುದಿಲ್ಲ ಎಂಬುವುದು ತಪ್ಪು ನೀತಿ, ನೀವು ಯುವಜನರಿಗೆ ಮೋಸ ಮಾಡುತಿದ್ದೀರಿ. ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆಯನ್ನು ನಡೆಸಿ ಎಂದರು

ಸಿಐಡಿ ಒಳಗೆ ಹೋದ ಮೇಲೆ ಹೋಂ ಮಿನಿಸ್ಟರ್ ಮತ್ತು ಸಿಎಂ ತನಿಖಾಧಿಕಾರಿ ಆಗುತ್ತಾರೆ.ಇದು ನ್ಯಾಯಾಂಗದಲ್ಲಿ ತನಿಖೆ ಆಗಬೇಕು ಎಂದು ನಾನು ಮೊದಲೇ ಆಗ್ರಹ ಮಾಡಿದ್ದೇನು. ನ್ಯಾಯಾಂಗ ತನಿಖೆ ಆರಂಭ ಆದ 24 ಗಂಟೆಗಳಲ್ಲಿ ಅಮೃತ್ ಪೌಲ್ ಬಂಧನವಾಗಿದೆ ಎಂದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!