ನಾಳೆಯಿಂದ ಪಿಯು ಕಾಲೇಜುಗಳು ಆರಂಭ: ಸಮವಸ್ತ್ರ ನಿಯಮ ಕಡ್ಡಾಯ ಪಾಲನೆಗೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌

ಕೊರೋನಾದಿಂದ 2 ವರ್ಷಗಳಿಂದವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಲ್ಲದೆ ಆನ್‌ ಲೈನ್‌ ಮೂಲಕವೇ ಶಿಕ್ಷಣ ನಡೆಯುತ್ತಿತ್ತು. ಇದೀಗ ಜೂನ್ 9 ರ ನಾಳೆಯಿಂದ ಪಿಯು ಕಾಲೇಜುಗಳು ಆರಂಭವಾಗುತ್ತಿದೆ.

ಇದೀಗ ಆರಂಭಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಪಿಯುಸಿ ಬೋರ್ಡ್ ಮಾರ್ಗಸೂಚಿ ಮತ್ತು ವೇಳಾಪಟ್ಟಿ ಪ್ರಕಟ ಮಾಡಿದೆ.

ನಾಳೆಯಿಂದ ಪಿಯು ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ. ಈ ವರ್ಷದಿಂದ ಕಡ್ಡಾಯವಾಗಿ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಆದೇಶ ಹೊರಡಿಸಿದೆ.

ಇನ್ನು ದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯ ನಡೆಯುತ್ತಿರುವುದರಿಂದ ಆರಂಭದಲ್ಲಿ ಉಪನ್ಯಾಸಕರ ಹಾಜರಾತಿ ಕಡಿಮೆ ಇರಲಿದೆ ಎನ್ನಲಾಗಿದ್ದು, ಜೂನ್ 13 ರಿಂದ ಉಪನ್ಯಾಸಕರು ಪೂರ್ಣಪ್ರಮಾಣದಲ್ಲಿ ಹಾಜರಾಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!