ದಿಗಂತ ವರದಿ ವಿಜಯಪುರ:
ಪ್ರಸಕ್ತ ವರ್ಷದ ಪಿಯುಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಅಮೋಘ ಸಾಧನೆ ತೋರಿದ್ದಾರೆ.
ನಗರದ ಎಸ್ ಎಸ್ ಪಿ ಯು ಕಾಲೇಜಿನ ವೇದಾಂತ ನಾವಿ ಆರ್ಟ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾನೆ. ಮೂಲತಃ ಜಮಖಂಡಿ ತಾಲೂಕಿನ ಕಲ್ಲಬೀಳಗಿ ಗ್ರಾಮದ ವೇದಾಂತ ನಾವಿ ಉತ್ತನ ಸಾಧನೆ ಮಾಡಿದ್ದಾನೆ.
ಆರ್ಟ್ಸ್ ವಿಭಾಗದಲ್ಲಿ ಸೌಂದರ್ಯಾ ಹಚಡದ 9 ನೇ ಸ್ಥಾನ ಪಡೆದಿದ್ದು, ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಟಣ ಗ್ರಾಮದ ಶರಣ ಬಸವೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ.
ಮೂಲತಃ ಸಿಂದಗಿ ತಾಲೂಕಿನ ಸೋಮಜಾಳ ಗ್ರಾಮದ ಸೌಂದರ್ಯ ಹಚಡದ ರೈತಾಪಿ ಕುಟುಂಬದ ಪ್ರತಿಭೆಯಾಗಿದ್ದಾಳೆ.
ಇನ್ನು ಸಿಂದಗಿ ತಾಲೂಕಿನ ದೇವರ ನಾವದಗಿ ಗ್ರಾಮದ ಗುಗ್ಗರಿ ಕಾಲೇಜಿನ ವಿದ್ಯಾರ್ಥಿನಿ ಸಂಗಮ್ಮ ಸಿನ್ನೂರ ರಾಜ್ಯಕ್ಕೆ 11 ಸ್ಥಾನ, ಇದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಬನಶಂಕರಿ ಹೂನಳ್ಳಿ 13 ನೇ ಸ್ಥಾನ ಪಡೆದಿದ್ದಾಳೆ.
ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಬ್ಯಾಕೋಡ ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ರೀಲತಾ ಲಿಂಗರೆಡ್ಡಿ ರಾಜ್ಯಕ್ಕೆ 17 ನೇ ಸ್ಥಾನ ಪಡೆದಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.