ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ವಾರಾಣಸಿಯಲ್ಲಿ 12 ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ 23 ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರು 23 ಪುರುಷರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅವರಲ್ಲಿ 11 ಮಂದಿಯನ್ನು ಇನ್ನೂ ಪತ್ತೆಹಚ್ಚಿಲ್ಲ. ಇಲ್ಲಿಯವರೆಗೆ 6 ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ಹೇಳಿಕೆಯ ಪ್ರಕಾರ, ಮಾರ್ಚ್ 29ರಂದು ಸ್ನೇಹಿತನೊಬ್ಬ ಪಿಶಾಚ್‌ಮೋಚನ್ ಪ್ರದೇಶದ ಹುಕ್ಕಾ ಬಾರ್‌ಗೆ ಅವಳನ್ನು ಕರೆದುಕೊಂಡು ಹೋಗಿದ್ದ. ಅಲ್ಲಿ ಇತರ ಪುರುಷರು ಸಹ ಬಂದಿದ್ದರು. ಆ ಹುಡುಗಿ ಕುಡಿಯುವ ಕೋಲ್ಡ್ ಡ್ರಿಂಕ್‌ನಲ್ಲಿ ಮಾದಕ ದ್ರವ್ಯ ಮಿಕ್ಸ್ ಮಾಡಿ ಸಿಗ್ರಾ ಪ್ರದೇಶದ ವಿವಿಧ ಹೋಟೆಲ್‌ಗಳಿಗೆ ಕರೆದೊಯ್ಯಲಾಯಿತು. ಅಲ್ಲಿ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆರೋಪಿಗಳಲ್ಲಿ ಕೆಲವರು ಅವಳಿಗೆ ಪರಿಚಿತರು, ಇನ್‌ಸ್ಟಾಗ್ರಾಮ್‌ನ ಪರಿಚಯಸ್ಥರು ಮತ್ತು ಮಾಜಿ ಸಹಪಾಠಿಗಳು. ಆ ಹುಡುಗಿಯ ಕುಟುಂಬದವರ ದೂರಿನ ನಂತರ, ಪೊಲೀಸರು ಅವಳನ್ನು ಪತ್ತೆಹಚ್ಚಿದರು. ಬಳಿಕ ಹುಕ್ಕಾ ಬಾರ್‌ನ ಸಿಬ್ಬಂದಿಯನ್ನು ಸಹ ವಿಚಾರಣೆ ಮಾಡಲು ಪ್ರಾರಂಭಿಸಿದರು. ತನಿಖೆಯ ಭಾಗವಾಗಿ ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಏಪ್ರಿಲ್ 4ರಂದು ಆಕೆಯ ಕುಟುಂಬದಿಂದ ಆಕೆ ನಾಪತ್ತೆಯಾದ ವ್ಯಕ್ತಿಯ ದೂರು ದಾಖಲಾಗಿತ್ತು. ಅದೇ ದಿನ ಆಕೆ ಪತ್ತೆಯಾಗಿದ್ದಳು. ಆ ಸಮಯದಲ್ಲಿ, ಆಕೆ ಅಥವಾ ಆಕೆಯ ಕುಟುಂಬದಿಂದ ಯಾವುದೇ ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿರಲಿಲ್ಲ. ಮಾರ್ಚ್ 29ರಿಂದ ಏಪ್ರಿಲ್ 4ರ ನಡುವೆ ನಡೆದಿರಬಹುದು ಎನ್ನಲಾದ ಸಾಮೂಹಿಕ ಅತ್ಯಾಚಾರ ಘಟನೆಯ ಕುರಿತು ಏಪ್ರಿಲ್ 6ರಂದು ಲಾಲ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ದೂರಿನ ಆಧಾರದ ಮೇಲೆ, ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.