AYODHYA | ಅಯೋಧ್ಯೆಯಲ್ಲಿ ಇಂದಿನಿಂದ ಪೂಜಾವಿಧಿ ಆರಂಭ, ಯಾವ ದಿನ ಏನು ಕಾರ್ಯಕ್ರಮ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀರಾಮನೂರಿನಲ್ಲಿ ಇಂದಿನಿಂದ ಸಂಭ್ರಮ ದುಪ್ಪಟ್ಟಾಗಿದೆ. ಅಯೋಧ್ಯೆಯ ಶ್ರೀರಾಮಪ್ರಾಣಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ.

ಇಂದಿನಿಂದ ಏಳು ದಿನಗಳು ವಿಭಿನ್ನ ಕಾರ್ಯಕ್ರಮಗಳು ನಡೆಯಲಿದ್ದು, ಜ.22ರಂದು ಪ್ರಾಣಪ್ರತಿಷ್ಠೆ ನಡೆಯಲಿದೆ.

  • ಜನವರಿ 15 ರಂದು ಮಹಾಮಸ್ತಕಾಭಿಷೇಕದ ವಿಧಿ ವಿಧಾನಗಳು ಆರಂಭವಾಗಲಿದೆ. ಪ್ರಾತಶ್ಚಿತ ಸಮಾರಂಭ ಹಾಗೂ ಸರಯೂ ನದಿಯ ದಡದಲ್ಲಿ ದಶವಿಧ ಸ್ನಾನ, ವಿಷ್ಣು ಪೂಜೆ ನಡೆಯಲಿದೆ.
  • ಜನವರಿ 17 ರಂದು ರಾಮಲಲಾ ಮೂರ್ತಿ ಅಯೋಧ್ಯೆ ತಲುಪಲಿದೆ. ಮಂಗಳ ಕಲಶದಲ್ಲಿ ಸರಯೂ ಪವಿತ್ರ ಜಲವನ್ನು ಹೊತ್ತ ಭಕ್ತರು ಅಯೋಧ್ಯೆಗೆ ಆಗಮಿಸಲಿದ್ದಾರೆ.
  • ಜನವರಿ 18 ರಂದು ಗಣೇಶ ಅಂಬಿಕಾ ಪೂಜೆ, ವರುಣನ ಪೂಜೆ, ಮಾತೃಕಾ ಪೂಜೆ ಹಾಗೂ ವಾಸ್ತು ಪೂಜೆ ನಡೆಯಲಿದೆ.
  • ಜನವರಿ 19 ರಂದು ಮೊದಲ ಬಾರಿಗೆ ಪವಿತ್ರ ಅಗ್ನಿಯನ್ನು ಬೆಳಗಿಸಲಾಗುತ್ತದೆ. ನಂತರ ನವಗ್ರಹ ಹಾಗೂ ಹವನ ಸ್ಥಾಪನೆ ಮಾಡಲಾಗುತ್ತದೆ.
  • ಜನವರಿ 20 ರಂದು ಗರ್ಭಗುಡಿಯನ್ನು ಸರಯೂ ಪವಿತ್ರ ನೀರಿನಿಂದ ತೊಳೆಯಲಾಗುತ್ತದೆ. ನಂತರ ವಾಸ್ತು ಶಾಂತಿ ಹಾಗೂ ಅನ್ನಾದಿವಾಸ್ ಆಚರಣೆ ನಡೆಯುತ್ತದೆ.
  • ಜನವರಿ 21 ರಂದು ರಾಮಲಲಾ ವಿಗ್ರಹಕ್ಕೆ 125 ಕಲಶಗಳ ಸ್ನಾನ ಮಾಡಿಸಲಾಗುತ್ತದೆ.
  • ಜನವರಿ 22 ರಂದು ಮುಖ್ಯ ಕಾರ್ಯಕ್ರಮವಾದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ೧೨:೨೦ರ ಮಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಗಣ್ಯರು ಆಗಮಿಸಲಿದ್ದಾರೆ.
  • ಜನವರಿ 23 ರಿಂದ ಭಕ್ತರು ರಾಮಲಲಾ ದರುಶನ ಪಡೆಯಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!