ಗಿರ್ ಅರಣ್ಯದಲ್ಲಿ ಓರ್ವನಿಗಾಗಿ ಮತಗಟ್ಟೆ: ಕೇವಲ ಒಂದೇ ವೋಟ್‌ನಿಂದ 100% ಮತದಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಲೋಕಸಭಾ ಚುನಾವಣೆಗೆ ಗುಜರಾತ್‌ನ ಅರಣ್ಯವೊಂದರಲ್ಲಿ ಇರುವ ಒಬ್ಬ ವ್ಯಕ್ತಿ ಮತದಾನ ಮಾಡಿದ್ದೂ, ಈ ಮೂಲಕ ಒಂದು ಮತದಿಂದ 100% ಮತದಾನ ಪ್ರಮಾಣ ದಾಖಲಾಗಿದೆ.

ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಸಿಂಹಗಳ ಆವಾಸಸ್ಥಾನವಾದ ಗಿರ್ ಅರಣ್ಯದ ಮೂಲಕ ತೆರಳಿ ಬನೇಜ್‌ನಲ್ಲಿ ಅಧಿಕಾರಿಗಳು ಮತಗಟ್ಟೆ ಸ್ಥಾಪಿಸಿದ್ದರು. ಅಲ್ಲಿ ಮಹಂತ್ ಹರಿದಾಸ್ ಉದಾಸೀನ್ ಹೆಸರಿನ ಏಕೈಕ ನಿವಾಸಿ ಮತ ಚಲಾಯಿಸಿದ್ದಾರೆ.

ಕೇವಲ ಒಬ್ಬ ಮತದಾರನಿಗಾಗಿ 10 ಜನರ ಅಧಿಕಾರಿಗಳ ತಂಡವು ಕಾಡಿಗೆ ತೆರಳಿದ್ದರು. ಉದಾಸೀನ್‌ ಅವರು ಮತ ಚಲಾಯಿಸಿದ್ದಾರೆ. ಮತದಾನದ ಬಳಿಕ ಶಾಹಿ ಹಾಕಿರುವ ಬೆರಳನ್ನು ತೋರಿಸಿ ಹಕ್ಕು ಚಲಾಯಿಸಿದ್ದೇನೆಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

ಕಾಡಿನಲ್ಲಿದ್ದ ಅರ್ಚಕ ಉದಾಸೀನ್‌ ಅವರ ಒಂದು ವೋಟಿಗಾಗಿ ಗುಜರಾತ್‌ನ ಅಧಿಕಾರಿಗಳು ಅರಣ್ಯ ಮಾರ್ಗದಲ್ಲಿ ಸುಮಾರು 2 ದಿನಗಳ ಕಾಲ 40% ಸೆಲ್ಸಿಯಸ್‌ ತಾಪಮಾನದ ಸುಡು ಬಿಸಿಲಿನಲ್ಲಿ ಪ್ರಯಾಸದ ಪ್ರಯಾಣ ಮಾಡಿದ್ದರು.

ಮತಗಟ್ಟೆ ಮತ್ತು ವ್ಯಕ್ತಿ ಇರುವ ಸ್ಥಳವು ಮೈಲುಗಳಷ್ಟು ದೂರವಿತ್ತು. ಒಬ್ಬರೇ ಮತದಾರ ಇದ್ದರೂ, ಅವರು ಬಂದು ಮತ ಚಲಾಯಿಸುವವರೆಗೂ ಬೂತ್‌ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಕಾನೂನಿನ ಪ್ರಕಾರ ಪ್ರತಿ ಮತಗಟ್ಟೆಗೆ ಕನಿಷ್ಠ ಆರು ಮಂದಿ ಮತಗಟ್ಟೆ ಸಿಬ್ಬಂದಿ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ನೇತೃತ್ವ ವಹಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!