ಪುಲ್ವಾಮಾ ದಾಳಿ: ಚಂದು ಪಾಟೀಲ್ ಫೌಂಡೇಶನ್ ವತಿಯಿಂದ ಮೆಣದ ಬತ್ತಿ ಮೆರವಣಿಗೆ

ಹೊಸದಿಗಂತ ವರದಿ,ಕಲಬುರಗಿ 

ಭಾರತ ದೇಶದ ಗಡಿ ಭಾಗದ ಸೇವೆಯಲ್ಲಿ ನಿರತರಾದ ನಮ್ಮ ವೀರ ಸೈನಿಕರಿಗೆ ಸದಾ ನಾವು ಬೆಂಬಲವಾಗಿ ಇರಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕನಾ೯ಟಕ ಉತ್ತರ ಪ್ರಾಂತದ ಪ್ರಾಂತ ಭೌದ್ದಿಕ ಪ್ರಮುಖರಾದ ಶ್ರೀಯುತ ಕೃಷ್ಣಾ ಜೋಶಿ ತಿಳಿಸಿದರು.
ಅವರು ಸೋಮವಾರ ಸಂಜೆ ನಗರದ ನಗರೇಶ್ವರ ಶಾಲೆಯಿಂದ ಚೌಕ ಪೋಲಿಸ್ ಠಾಣೆಯವರೆಗೆ ಚಂದು ಪಾಟೀಲ್ ಫೌಂಡೇಶನ್ ವತಿಯಿಂದ ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸುವ ನಿಮಿತ್ತ ಹಮ್ಮಿಕೊಂಡಿದ್ದ ಮೆಣದಬತ್ತಿ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪಾಕಿಸ್ತಾನ ಪದೇ ಪದೇ ನಿಚ ಕೃತ್ಯಕ್ಕೆ ಕೈ ಹಾಕುತ್ತಿದ್ದು, ಸರಿಯಾದ ವತ೯ನೆಯಲ್ಲ. ಇಂತಹ ಚಾಡಿಯನ್ನು ಪ್ರತಿ ಸಲ ಮುಂದುವರೆಸಿಕೊಂಡು ಹೋದಾಗ ಭಾರತ ದೇಶ ತಕ್ಕ ಉತ್ತರ ನೀಡಿದೆ ಎಂದರು. ದುಸ್ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಶಕ್ತಿಗಳನ್ನು ಮಟ್ಟಹಾಕಬೇಕಿದೆ ಎಂದರು.
ಪಾಕಿಸ್ತಾನ,ಚೀನಾ ಭಾರತ ದೇಶದ ವಿರುದ್ಧ ಎಷ್ಟೇ ಶಡ್ಯಂತ್ರಗಳನ್ನು ರಚಿಸಿದರೂ,ಭಾರತ ಸಮಥ೯ವಾಗಿ ಉತ್ತರ ಕೊಡುವಂತಹ ನಾಯಕತ್ವ ಹೊಂದಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಒಳ್ಳೆಯ ನಿದಾ೯ರಗಳಿಂದ ದೇಶದ ಗಡಿಯಲ್ಲಿರುವ ಸೈನಿಕರು ಸುರಕ್ಷೀತವಾಗಿದ್ದಾರೆ ಎಂದರು.
ಯುವ ಮುಖಂಡ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ದೇಶಕೋಸ್ಕರ ತಮ್ಮ ಪ್ರಾಣವನ್ನೆ ಧಾರೆಯೆರೆದು ತಾಯಿ ಭಾರತ ಮಾತೆಯ ಸೇವೆಯನ್ನು ಮಾಡುತ್ತಿರುವ ನಮ್ಮ ಸೈನಿಕರ ಕಾಯ೯ ನಿಜಕ್ಕೂ ಶ್ಲಾಘನೀಯ. ವೀರ ಮರಣ ಹೊಂದಿದ ನಮ್ಮ ಸೈನಿಕರ ಕುಟುಂಬದ ‌ಸದಸ್ಯರಿಗೆ ನಾನು ಕೈ ಜೋಡಿಸಿ ನಮಸ್ಕರಿಸುವೆ ಎಂದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ ಶಾ ಅವರಿಂದ ಒಳ್ಳೆಯ ನಿದಾರಗಳಿಂದ ಕುತಂತ್ರ ನಡೆಸುವವರಿಗೆ ಒಳ್ಳೆಯ ಉತ್ತರ ನೀಡಲು ದೇಶ ಸಜ್ಜಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಈರಣ್ಣಾ ಹೂಗಾರ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಆಶೋಕ ಮಾನಕರ್,ಚನ್ನವೀರ ಲಿಂಗನವಾಡಿ, ಚನ್ನು ಚಪ್ಪರಬಂಡಿ ಸೇರಿದಂತೆ ಅನೇಕ ಯುವಕರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!