ಪುಲ್ವಾಮಾ ದಾಳಿ ಪಾಕ್‌ ಕುಕೃತ್ಯ ಅಲ್ಲ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ಅಭ್ಯರ್ಥಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆ ಚುನಾವಣೆ ಭಾಗವಾಗಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಇದರ ನಡುವೆ ರಾಜಕೀಯ ನಾಯಕರ ಹೇಳಿಕೆಗಳು ವಿವಾದಗಳ ಸ್ವರೂಪ ಪಡೆಯುತ್ತಿದೆ .

ಮಹಾರಾಷ್ಟ್ರ ಪ್ರತಿಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್‌ ನಾಯಕ ವಿಜಯ್‌ ನಾಮದೇವರಾವ್ ವಡೆತ್ತಿವಾರ್‌ ಅವರು ಉಗ್ರ ಅಜ್ಮಲ್‌ ಕಸಬ್‌ (Ajmal Kasab) ಪರವಾಗಿ ಮಾತನಾಡಿರುವ ಬೆನ್ನಲ್ಲೇ ಮತ್ತೊರ್ವ ಕಾಂಗ್ರೆಸ್‌ ನಾಯಕ ಪುಲ್ವಮಾ ದಾಳಿ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಕ್ಲೀನ್‌ ಚಿಟ್‌ ಕೊಟ್ಟಿದ್ದಾರೆ.

ಹರಿಯಾಣದ ಫರಿದಾಬಾದ್‌ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಮಹೇಂದರ್‌ ಪ್ರತಾಪ್‌ ಸಿಂಗ್‌(Mahender Pratap Singh) 2019ರಲ್ಲಿ ನಡೆದ ಪುಲ್ವಾಮಾ ದಾಳಿ ಪಾಕಿಸ್ತಾನ ನಡೆಸಿರುವುದಲ್ಲ, ಬದಲಿಗೆ ಭಾರತ ಸರ್ಕಾರ ನಡೆಸಿರುವುದು ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮಹೇಂದರ್‌ ಪ್ರತಾಪ್‌ ಸಿಂಗ್‌, ಪುಲ್ವಾಮಾದ ಬಹುದೊಡ್ಡ ದಾಳಿಯ ಸೂಚನೆ ಇರುವುದರಿಂದ ನಮ್ಮ ಯೋಧರು ರಸ್ತೆ ಮೂಲಕ ಬರುವುದು ಅಷ್ಟೊಂದು ಸುರಕ್ಷಿತ ಅಲ್ಲ. ಅವರನ್ನು ಏರ್‌ಲಿಫ್ಟ್‌ ಮಾಡುವ ಎಂದು ಪ್ರಧಾನಿಗೆ ಮೊದಲೇ ಮನವಿ ಮಾಡಿದ್ದೆ ಎಂದು ಅವರದ್ದೇ ರಾಜ್ಯಪಾಲ ಸತ್ಯಪಾಲ್‌ ಮಲ್ಲಿಕ್‌ ಈ ಹಿಂದೆಯೇ ಹೇಳಿದ್ದರು. ಹೀಗಾಗಿ ಅದು ಒಂದು ಬಿಜೆಪಿಯ ರಾಜಕೀಯ ಪಿತೂರಿ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಅದು ಎರಡನೇ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ನಡೆಸಿದ ಚುನಾವಣಾ ಸ್ಟಂಟ್‌. ಇದೀಗ ಅವರು ಮೂರನೇ ಬಾರಿ ಗೆಲುವಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ಬಿಜೆಪಿ ಮುಖಂಡ ವಿಷ್ಣುವರ್ಧನ್‌ ರೆಡ್ಡಿ ಎಕ್ಸ್‌ನಲ್ಲಿ ಶೇರ್‌ ಮಾಡಿದ್ದು, ಪುಲ್ವಾಮಾ ದಾಳಿಯಲ್ಲಿ ಭಾರತ 40ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ. ಇಡೀ ದೇಶವೇ ಪಾಕಿಸ್ತಾನದ ಕುತಂತ್ರದ ಬಗ್ಗೆ ಕೆಂಡ ಕಾರುತ್ತಿದೆ. ಆದರೆ ಲಜ್ಜೆಗೆಟ್ಟ ಕಾಂಗ್ರೆಸ್‌ ಮಾತ್ರ ಪಾಕಿಸ್ತಾನಕ್ಕೆ ಕ್ಲೀನ್‌ ಚಿನ್‌ ನೀಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!