ಹೊಸದಿಗಂತ ಡಿಜಿಟಲ್ ಡೆಸ್ಕ್:
2019 ರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು.
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ ಪಿಎಂ ಮೋದಿ, “2019 ರಲ್ಲಿ ಪುಲ್ವಾಮಾದಲ್ಲಿ ನಾವು ಕಳೆದುಕೊಂಡ ಧೈರ್ಯಶಾಲಿ ವೀರರಿಗೆ ನಮನಗಳು. ಮುಂಬರುವ ಪೀಳಿಗೆಗಳು ಅವರ ತ್ಯಾಗ ಮತ್ತು ರಾಷ್ಟ್ರಕ್ಕಾಗಿ ಅವರ ಅಚಲವಾದ ಸಮರ್ಪಣೆಯನ್ನು ಎಂದಿಗೂ ಮರೆಯುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.