ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ, ಅಪ್ಪು ಇಲ್ಲದೆ ಒಂದು ವರ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವರ್ಷ ಕಳೆದಿದೆ. ಇಂದು ಪುನೀತ್ ಮೊದಲ ವರ್ಷದ ಪುಣ್ಯಸ್ಮರಣೆ. ಅಪ್ಪು ಸಮಾಧಿಗೆ ರಾಜ್ ಕುಟುಂಬದ ಸದಸ್ಯರು ಪೂಜೆ ಸಲ್ಲಿಸುತ್ತಿದ್ದಾರೆ. ಸಮಾಧಿ ಬಳಿ ಅಭಿಮಾನಿಗಳು ಆಗಮಿಸಿದ್ದು, ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಸಮಾಧಿ ಬಳಿ ಪೂಜೆ ಬಳಿಕ ಪುನೀತ್ ನಿವಾಸದಲ್ಲಿ ಕಳಸ ಪೂಜೆ ನೆರವೇರಲಿದೆ. ಅಪ್ಪು ಪುಣ್ಯ ಸ್ಮರಣೆಗೆ ಬೇರೆ ಬೇರೆ ಊರುಗಳಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಸಮಾಧಿ ಇರುವ ಕಂಠೀರವ ಸ್ಟುಡಿಯೋ ಹೊರತಗೆ ಅಪ್ಪು ಅವರ ವಿಶೇಷವಾದ ಕಟೌಟ್‌ಗಳನ್ನು ಹಾಕಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಅಪ್ಪು ಅಭಿಮಾನಿಗಳು, ಪುನೀತ್ ಫೋಟೊಗಳನ್ನು ಹಾಕಿ ನೆನೆದು ಭಾವುಕರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!