ಬರೋಬ್ಬರಿ 4,000 ಚಿತ್ರಮಂದಿರಗಳಲ್ಲಿ ಅಪ್ಪು ನಟನೆಯ ʼಜೇಮ್ಸ್‌ʼ ಚಿತ್ರ ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಕೊನೆಯ ಚಿತ್ರ ಇದೇ ಮಾ.17ಕ್ಕೆ ವಿಶ್ವದಾದ್ಯಂತ ಬರೋಬ್ಬರಿ 4 ಸಾವಿರ ಸ್ಕ್ರೀನ್‌ ಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಜೇಮ್ಸ್‌ ಚಿತ್ರದ ಸೆನ್ಸಾರ್‌ ಕೆಲಸ ಕೂಡ ನಡೆದಿದ್ದು, ಯಾವುದೇ ಕಟ್ಸ್‌ ಗಳಿಲ್ಲದೆ ಯು/ಎ ಸರ್ಟಿಫಿಕೇಟ್‌ ಪಡೆದುಕೊಂಡಿದೆ.
ಇನ್ನು ಅಪ್ಪು ಅಭಿಮಾನಿಗಳು ಪುನೀತ್‌ ನಟನೆಯ ಕೊನೆಯ ಚಿತ್ರವನ್ನು ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಕರ್ನಾಟಕ ಒಂದರಲ್ಲೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.
ಪುನೀತ್ ವಿರುದ್ಧ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ನಟ ಶರತ್ ಕುಮಾರ್, ಶ್ರೀಕಾಂತ್ ಆದಿತ್ಯ ಮೆನನ್, ಹಾಸ್ಯನಟ ಸಾಧು ಕೋಕಿಲಾ, ಅನು ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಕಿಶೋರ್ ನಿರ್ಮಾಣ ಮಾಡಿದ್ದಾರೆ. ನಟ ಶಿವರಾಜಕುಮಾರ್ ಇಡೀ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here