ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ಪಂಜಾಬ್ ಸಿಎಂ ಪತ್ನಿಗೆ ಶಾಕ್ ಕೊಟ್ಟ ಟ್ವಿಟರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆ ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗುರುಪ್ರೀತ್ ಕೌರ್ ಅವರಿಗೆ ​ಟ್ವಿಟರ್ ಶಾಕ್ ನೀಡಿದ್ದು, ಅವರ ಖಾತೆ ಅಮಾನತುಗೊಳಿಸಲಾಗಿದೆ.
ಮಾಹಿತಿ ಪ್ರಕಾರ ಟ್ವಿಟರ್​ ಖಾತೆಯಲ್ಲಿ ‘ಸಮುದಾಯ ಮಾನದಂಡ ಉಲ್ಲಂಘನೆ’ ಮಾಡಿದ್ದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹರಿಯಾಣದ ಡಾ. ಗುರುಪ್ರೀತ್ ಕೌರ್​​ ಸಿಎಂ ಭಗವಂತ್ ಮಾನ್​​ ಅವರೊಂದಿಗೆ ನಿನ್ನೆ ಡಾ. ಗುರುಪ್ರೀತ್ ಕೌರ್​​ ವಿವಾಹವಾದರು. ತಮ್ಮ ಮದುವೆಯ ಅನೇಕ ಚಿತ್ರ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ. ಕೆಲವೊಂದು ಮಾಹಿತಿಗಳ ಪ್ರಕಾರ ಇದು ಫೇಕ್​ ಅಕೌಂಟ್​ ಎಂದು ಹೇಳಲಾಗುತ್ತಿದೆ.
ಮದುವೆಗೂ ಮುಂಚೆ ತಮ್ಮ ಫೋಟೋ ಹಂಚಿಕೊಂಡಿದ್ದ ಡಾ. ಗುರುಪ್ರೀತ್ ಕೌರ್​, ‘ಮದುವೆಯ ದಿನ ಬಂದಿದೆ’ ಎಂದು ಬರೆದುಕೊಂಡಿದ್ದರು. ಜೊತೆಗೆ ಎಎಪಿ ಪಕ್ಷದ ಅನೇಕ ನಾಯಕರಿಗೆ ಧನ್ಯವಾದ ಅರ್ಪಿಸಿದ್ದರು. ಟ್ವಿಟರ್​​ನಲ್ಲಿ ತುಂಬಾ ಸಕ್ರಿಯವಾಗಿರುವ ಕೌರ್​, ಪಂಜಾಬ್ ಸಿಎಂ ಭಗವಂತ್ ಮಾನ್​ ಅವರ ಟ್ವೀಟ್​​ಗಳನ್ನ ರೀಟ್ವೀಟ್ ಮಾಡುತ್ತಿರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!