ತಾಯಿಯನ್ನು ರೈಲ್ವೆ ನಿಲ್ದಾಣದಲ್ಲಿ ಸಾಯಲು ಬಿಟ್ಟ ನವಜೋತ್ ಸಿಂಗ್ ಸಿಧು?- ಪಂಜಾಬ್ ಚುನಾವಣೆ ಎದುರಲ್ಲೇ ಎದುರಾಯ್ತು ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಪಂಜಾಬ್‌ ನ ಕಾಂಗ್ರೆಸ್ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧುಗೆ ಕಂಟಕ ಎದುರಾಗಿದೆ.
ಹೆತ್ತ ತಾಯಿಯನ್ನು ರೈಲ್ವೆ ನಿಲ್ದಾಣದಲ್ಲಿ ಸಾಯಲು ಬಿಟ್ಟಿದ್ದರು ಎಂಬುದಾಗಿ ಸಿಧು ಸಹೋದರಿ ಸುಮನ್‌ ತುರ್ ಗಂಭೀರ ಆರೋಪ ಮಾಡಿದ್ದಾರೆ. ಇವರು ಅಮೆರಿಕದಲ್ಲಿ ವಾಸವಿರುತ್ತಾರೆ.
ಸಿಧು ಬಗ್ಗೆ ಚಂಢೀಗಡದಲ್ಲಿ ಮಾಧ್ಯಮದ ಎದುರು ಮಾತನಾಡಿದ ಸುಮನ್‌, ನನ್ನ ಸಹೋದರ ನವಜೋತ್‌ ಸಿಂಗ್‌ ಸಿಧು ಹಣದ ಆಸೆಗಾಗಿ ತಾಯಿಯನ್ನು ತೊರೆದಿದ್ದ. ಸಿಧು ಒಬ್ಬ ಕ್ರೂರ ವ್ಯಕ್ತಿ ಎಂದು ಆಕೆ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ 1986ರಲ್ಲಿ ತಂದೆಯ ನಿಧನದ ನಂತರ ತಮ್ಮನ್ನು ಹಾಗೂ ತಾಯಿಯನ್ನು ಮನೆಯಿಂದ ಹೊರ ಹಾಕಿದ್ದರು. ತಾಯಿ ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲಿ ಬಳಲಿ, ರೈಲ್ವೆ ನಿಲ್ದಾಣದಲ್ಲಿ ಪ್ರಾಣ ಬಿಟ್ಟಳು. ನಾನು ಹೇಳುವ ಹೇಳಿಕೆಗಳ ಕುರಿತು ನನ್ನ ಹತ್ತಿರ ಎಲ್ಲಾ ರೀತಿಯ ಸಾಕ್ಷ್ಯಾಧಾರಗಳು ಇವೆ ಎಂದು ಸ್ಪಷ್ಟ ನುಡಿಗಳನ್ನಾಡಿದರು.
ನವಜೋತ್ ಸಿಂಗ್ ಸಿಧುಯಿಂದ ನಮಗೆ ಯಾವುದೇ ಹಣ ಬೇಡ. ಜ.20ರಂದು ಸಿಧುವನ್ನು ಭೇಟಿ ಮಾಡಲು ತೆರಳಿದ್ದ ಸುಮನ್‌ ಅವರಿಗೆ ಭೇಟಿ ನಿರಾಕರಿಸಿರುವುದು ಬೇಸರ ತಂದಿದೆ ಎಂದರು.
ಸಿಧು ಸಂಪರ್ಕ ಸಿಗದ ಕಾರಣಕ್ಕೆ ಇಂದು ಸುಮನ್ ಮಾಧ್ಯಮಗಳ ಎದುರು ಈ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಈ ಆರೋಪ ಪಂಜಾಬ್‌ ವಿಧಾನಸಭಾ ಚುನಾವಣೆ ವೇಳೆ ಕೇಳಿ ಬಂದಿರುವುದು ಕಾಂಗ್ರೆಸ್‌ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಎಲ್ಲಾ 117 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಈ ವಿಚಾರ ರಾಜಕೀಯ ರಂಗದಲ್ಲಿ ಯಾವ ರೀತಿ ತಿರುವು ಪಡೆಯಲಿದೆ ಎಂದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!