ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆದ್ದಾರಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಇದ್ದಕ್ಕಿದ್ದಂತೆ ನಡು ರಸ್ತೆಯಲ್ಲಿ ಮಲಗಿದ್ದನ್ನು ಕಂಡು ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಆತ ಯಾಕೆ ಹಾಗೆ ಮಾಡುತ್ತಿದ್ದಾನೆಂಬುದು ನೋಡುಗರಿಗೆ ಅರ್ಥವಾಗಲೇ ಇಲ್ಲ. ಬಳಿಕ ಏನಾಯ್ತು ಎಂದು ವಿಚಾರಿಸಿದ ಅಸಲಿ ಸತ್ಯ ಬೆಳಕಿಗೆ ಬಂದಿದೆ.
ಪಂಜಾಬ್ ರಾಜ್ಯದ ಜಲಂಧರ್‌ನ ಭೋಗ್‌ಪುರ ಪೊಲೀಸ್ ಠಾಣೆಯ ಕರ್ಮಕಾಂಡವನ್ನು ಒಂದೊಂದಾಗೇ ಈ ಪೇದೆ ಬಿಚ್ಚಿಟ್ಟಿದ್ದಾರೆ. ಲಂಚ ತೆಗೆದುಕೊಂಡು ಆರೋಪಿಗಳನ್ನು ಬಚಾವ್ ಮಾಡುತ್ತಿರುವುದು ನೋಡಿ ನೋಡಿ ಸಾಕಾಗಿ ಈ ಇದರ ವಿರುದ್ಧ ಪ್ರತಿಭಟಿಸಲು ರಸ್ತೆ ಮಧ್ಯೆ ಮಲಗಿದ್ದಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ಅಪರಾಧಗಳನ್ನು ತಡೆಯಬೇಕಾದ ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಪೊಲೀಸ್ ಪೇದೆಯ ಈ ನಿರ್ಧಾರದಿಂದ ಕೆಲಕಾಲ ಜಲಂಧರ್‌ನ ಭೋಗ್‌ಪುರ ಪ್ರದೇಶದ ಪಠಾಣ್‌ಕೋಟ್ ಹೆದ್ದಾರಿ ಬಂದ್ ಆಗಿದ್ದಂತೂ ಸುಳ್ಳಲ್ಲ.
ಪೊಲೀಸ್ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ‘ನಾನು ಕಳ್ಳರನ್ನು ಹಿಡಿಯುತ್ತೇನೆ, ಆದರೆ ನನ್ನ ಪೊಲೀಸ್ ಠಾಣೆಯ ಪೊಲೀಸರು ಹಣ ತೆಗೆದುಕೊಂಡ ಅವರನ್ನು ಬಿಟ್ಟು ಕಳಿಸುತ್ತಾರೆ’ ಎಂದು ಅಳಲು ತೋಡಿಕೊಂಡರು.
ಗೃಹರಕ್ಷಕ ದಳದ ಸಿಬ್ಬಂದಿ ಒಬ್ಬನನ್ನು ಬಂಧಿಸಿ ಭೋಗ್‌ಪುರ ಠಾಣೆಗೆ ಕರೆದೊಯ್ದಿದ್ದಾರೆ. ನಿನ್ನೆ ಪೊಲೀಸ್ ಠಾಣೆಗೆ ತೆರಳಿ ಆ ವ್ಯಕ್ತಿಯ ಬಗ್ಗೆ ಕೇಳಿದಾಗ ಸಹ ಪೊಲೀಸರು ನುಣುಚಿಕೊಳ್ಳುವ ಉತ್ತರ ನೀಡಿದ್ದಾರೆ. ಇದರಿಂದ ಬೇಸತ್ತ ಪೇದೆ ನಾಲ್ಕು ಪಥಗಳಲ್ಲಿ ಹಗ್ಗ ಕಟ್ಟಿ ಸಂಚಾರ ಸ್ಥಗಿತಗೊಳಿಸಿ ನಡು ರಸ್ತೆಯಲ್ಲಿ ಮಲಗಿದರು.
ಈ ಕುರಿತು ಭೋಗ್‌ಪುರ ಪೊಲೀಸ್ ಠಾಣೆ ಪ್ರಭಾರಿ ಸುಖಜಿತ್ ಸಿಂಗ್ ಮಾತನಾಡಿ.. ‘ಹೋರಾಟಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಗೃಹರಕ್ಷಕ ದಳದ ಠಾಣೆಗೆ ಕರೆತರಲಾಗಿತ್ತು. ವ್ಯಕ್ತಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದು ಮಂಜೂರಾಗಿದೆ. ಇದಾದ ಬಳಿಕ ಆತನನ್ನು ಬಿಡುಗಡೆ ಮಾಡಲಾಯಿತು ಇದೆಷ್ಟೇ ನಡೆದಿದ್ದು, ಹೋಮ್ ಗಾರ್ಡ್ ಹೇಳಿದಂತೆ ಯಾವುದೇ ರೀತಿಯ ಭ್ರಷ್ಟ ಪ್ರಕರಣಗಳು ನಡೆದಿಲ್ಲ ಎಂಬ ಉತ್ತರ ನೀಡಿದರು.