ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯ ಹೆಚ್ಚಳ ದೇಶಕ್ಕೆ ತಲೆನೋವು ಆಗಿದ್ದು, ಇದನ್ನು ಕಡಿಮೆ ಮಾಡಲು ದೆಹಲಿ ಸರ್ಕಾರ ಬೇರೆ ಬೇರೆ ಕ್ರಮಗಳನ್ನು ತೆಗೆದುಕೊಂಡು ಬಂದಿದೆ. ಜತೆಗೆ ವಾಯುಮಾಲಿನ್ಯ ಉಂಟು ಮಾಡುವ ವಾಹನಗಳ ಓಡಾಟವನ್ನು ಕಡಿಮೆ ಮಾಡಿದೆ.
ಅಷ್ಟೇ ಅಲ್ಲದೆ ದೆಹಲಿ ಮಾಲಿನ್ಯಕ್ಕೆ ಪಕ್ಕದ ಪಂಜಾಬ್ ಕೂಡ ಕಾರಣವಾಗಿದೆ. ಪಂಜಾಬ್ನಲ್ಲಿ ವಿಪರೀತ ಹುಲ್ಲು ಸುಡುವುದರಿಂದ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿತು. ನೀವು ಹೇಗೆ ಮಾಡುತ್ತೀರಿ ಎಂಬುದು ನನಗೆ ತಿಳಿದಿಲ್ಲ, ಆದರೆ ಹುಲ್ಲು ಸುಡುವಿಕೆಯನ್ನು ಕಡಿಮೆ ಮಾಡಲೇಬೇಕು ಅದು ನಿಮ್ಮ ಕೆಲಸ, ಈ ಸಮಸ್ಯೆಗೆ ನೀವೇ ಪರಿಹಾರ ಕಂಡುಹಿಡಿಯಬೇಕು ಎಂದು ಹೇಳಿತ್ತು.
ಇದರ ಬೆನ್ನಲ್ಲೇ ಎಚ್ಚೆತ್ತ ಪಂಜಾಬ್ , ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ. ಈಗಾಗಲೇ ಹಸಿರು ನ್ಯಾಯಮಂಡಳಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನೀಡಿದ ಎಚ್ಚರಿಕೆಯ ನಂತರ ಪಂಜಾಬ್ನಲ್ಲಿ ಹುಲ್ಲು ಸುಡುವುದನ್ನು ಕಡಿಮೆ ಮಾಡಿದೆ. ಇದರ ಜತೆಗೆ ಪರಿಸರ ಹಾನಿ ಅಥವಾ ಹುಲ್ಲು ಸುಡುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನವೆಂಬರ್ 5 ರವರೆಗಿನ ಅಂಕಿ ಅಂಶಗಳ ಪ್ರಕಾರ 264 ರೈತರು ಹೆಚ್ಚು ಹುಲ್ಲುಗಳನ್ನು ಸುಡುತ್ತಾರೆ. ಇವರು ನಿಯಮ ಉಲ್ಲಂಘಿಸಿದ್ದು, ಈ ರೈತರನ್ನು ರೆಡ್ ಎಂಟ್ರಿ ಎಂದು ಘೋಷಣೆ ಮಾಡಿದ್ದಾರೆ. ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಆದರ್ಶ್ ಪಾಲ್ ಸಿಂಗ್ ಅವರು ಇಂತಹ ಕೆಲಸ ಮಾಡುವ ರೈತರಿಗೆ ಸರ್ಕಾರದ ಯೋಜನೆಗಳನ್ನು ನೀಡಲಾಗುವುದಿಲ್ಲ. ಜತೆಗೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಒಳ್ಳಗೊಂಡಿದೆ ಎಂದು ಹೇಳಿದ್ದಾರೆ.
ಇನ್ನು ರೆಡ್ ಎಂಟ್ರಿಯಲ್ಲಿರುವ ರೈತರಿಗೆ ಯಾವುದೇ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಇನ್ನು ಅಂತಹ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಲು ಕೂಡ ಸಾಧ್ಯವಿಲ್ಲ ಎಂದು ಆದರ್ಶ್ ಪಾಲ್ ಸಿಂಗ್ ಹೇಳಿದ್ದಾರೆ. ಇದರ ಜತೆಗೆ ರೈತರಲ್ಲಿ ಜಾಗೃತಿ ಕೂಡ ಮೂಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹುಲ್ಲು ಸುಡುವುದು ಕಡಿಮೆಯಾಗಲಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹುಲ್ಲು ಸುಡುವುದು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.