March 22, 2026
Sunday, March 22, 2026
spot_img

ಪಂಜಾಬ್ ನ ಪಿಎಸ್‌ಡಬ್ಲ್ಯೂಸಿ ಅಧಿಕಾರಿ ಆತ್ಮಹತ್ಯೆ ಕೇಸ್: ಮಾಜಿ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ವಿರುದ್ಧ ಎಫ್‌ಐಆರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಗೋದಾಮು ನಿಗಮದ ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್ ರಾಂಧವಾ ಅವರ ಆತ್ಮಹತ್ಯೆ ಕೇಸ್ ಸಂಬಂಧ ಈಗಾಗಲೇ ಪಂಜಾಬ್ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ರಾಜೀನಾಮೆ ನೀಡಿದ್ದು, ಇದೀಗ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗೋದಾಮು ಟೆಂಡರ್ ಅನ್ನು ತನ್ನವರಿಗೆ ನಡಿಯುವಂತೆ ಲಾಲ್ಜಿತ್ ಸಿಂಗ್ ಒತ್ತಡ ಹೇರಿದ್ದರು ಎಂಬ ಆರೋಪವಿದ್ದು, ಗಗನ್‌ದೀಪ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೃತರ ಪತ್ನಿ ಉಪಿಂದರ್ ಕೌರ್ ಸಲ್ಲಿಸಿದ ದೂರಿನ ಮೇರೆಗೆ ಪಂಜಾಬ್ ಪೊಲೀಸರು ಮಾಜಿ ಸಚಿವ ಲಾಲ್ಜಿತ್ ಸಿಂಗ್, ಅವರ ತಂದೆ ಸುಖದೇವ್ ಸಿಂಗ್ ಭುಲ್ಲರ್ ಮತ್ತು ಅವರ ಆಪ್ತ ಸಹಾಯಕ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !