ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ 100 ರೂ. ಜಂಟಿ ಹೂಡಿಕೆ ಮಾಡಿ ಇಬ್ಬರು ಸ್ನೇಹಿತರು ಒಂದೂವರೆ ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಾರೆ. ಸುಮ್ಮನೆ ಇರಲಿ ಎಂದು ಖರೀಸಿದ ಸ್ನೇಹಿತರಿಬ್ಬರಿಗೆ ಅದೃಷ್ಟ ಒಲಿದು ಬಂದಿದೆ. ಪಂಜಾಬ್ ನ ಇಬ್ಬರು ಗೆಳೆಯರು ತಲಾ ಐವತ್ತು ರೂಪಾಯಿ ಹಾಕಿ ಲಾಟರಿ ಟಿಕೆಟ್ ಖರೀದಿಸಿದ್ದು, ಆ ನೂರು ರೂ ಈಗ ಒಂದೂವರೆ ಕೋಟಿಯಾಗಿದೆ.
ಫಾಜಿಲ್ಕಾ ಜಿಲ್ಲೆಯ ಅಬೋಹರ್ ಪಟ್ಟಣದ ರಮೇಶ್ ಮತ್ತು ಕುಕಿ ಎಂಬ ಇಬ್ಬರು ಸ್ನೇಹಿತರು 14 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರೆ. ಯಾವಾಗ ತೆಗೆದುಕೊಂಡರೂ ಇಬ್ಬರು ಅರ್ಧ ಹಣ ಹಾಕಿ ಖರೀದಿಸುತ್ತಾರೆ. ಇದುವರೆಗೂ ಸಣ್ಣ ಉಡುಗೊರೆಗಳನ್ನು ಬಿಟ್ಟರೆ ದೊಡ್ಡದೇನೂ ಸಿಗುತ್ತಿರಲಿಲ್ಲ. ಆದರೂ ಬೇಜಾರಾಗದೆ ಲಾಟರಿ ಟಿಕೆಟ್ ಕೊಳ್ಳುವ ಕಾರ್ಯ ಮುಂದುವರೆಯುತ್ತಲೇ ಇತ್ತು. ಇದರ ಭಾಗವಾಗಿ ಈ ಬಾರಿ ಅದೃಷ್ಟ ಖುಲಾಯಿಸಿ 1.5 ಕೋಟಿ ರೂ ಬಹುಮಾನ ಗೆದ್ದಿದ್ದಾರೆ.
ಕಳೆದ ಭಾನುವಾರ (ಅಕ್ಟೋಬರ್ 1, 2023) ಬಿಡುಗಡೆಯಾದ ಫಲಿತಾಂಶಗಳಲ್ಲಿ, ಅವರು ಖರೀದಿಸಿದ ಟಿಕೆಟ್‌ಗೆ ಲಾಟರಿ ಹೊಡೆದಿದೆ. ಇಬ್ಬರೂ ಭಾವುಕರಾಗಿ ಅಪ್ಪಿಕೊಂಡು ಸಂತೋಷಪಟ್ಟರು. ಬ್ಯಾಂಡ್, ನೃತ್ಯಗಳೊಂದಿಗೆ ಸಿಹಿ ಹಂಚಿ ಕುಣಿದರು. ಈ ಲಾಟರಿ ಹಣವನ್ನು ತಮ್ಮ ಮಕ್ಕಳಿಗಾಗಿ ಮತ್ತು ಕೆಲವು ಆಧ್ಯಾತ್ಮಿಕ ಕಾರ್ಯಗಳಿಗಾಗಿ ಖರ್ಚು ಮಾಡುವುದಾಗಿ ರಮೇಶ್ ಮತ್ತು ಕುಕ್ಕಿ ಹೇಳಿದರು.