ಪೋಕಿರಿ, ಬ್ಯುಸಿನೆಸ್‌ಮ್ಯಾನ್ ಸೀಕ್ವೆಲ್ ಮಾಡ್ತೇನೆಂದ ಪೂರಿ ಜಗನ್ನಾಥ್‌: ಅಭಿಮಾನಿಗಳಲ್ಲಿ ಫುಲ್‌ ಜೋಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಭಿನ್ನ, ಹೊಸದಾಗಿ, ಮಾಸ್ ಪಾತ್ರಗಳಲ್ಲಿ ಹೀರೋಗಳನ್ನು ತೋರಿಸುತ್ತಾರಂದ್ರೆ ಪೂರಿ ಜಗನ್ನಾಥ್ ಅವರನ್ನು ಮೀರಿಸುವವರಿಲ್ಲ.  ಪ್ರಭಾಸ್, ಮಹೇಶ್, ರಾಮ್, ಪವನ್ ಕಲ್ಯಾಣ್, ಚರಣ್ ಮುಂತಾದ ಅನೇಕ ಸ್ಟಾರ್ ಹೀರೋಗಳನ್ನು ಮಾಸ್ ಹೀರೋಗಳನ್ನಾಗಿ ಮಾಡಿದವರು ಪೂರಿ ಜಗನ್ನಾಥ್. ಪ್ರತಿಯೊಬ್ಬ ಅಭಿಮಾನಿಯೂ ತಮ್ಮ ನಾಯಕ ಪೂರಿ ಜೊತೆ ಒಂದು ಸಿನಿಮಾವನ್ನಾದರೂ ಮಾಡಬೇಕೆಂದು ಬಯಸುತ್ತಾರೆ.

ಪುರಿ ಅವರ ವೃತ್ತಿಜೀವನದಲ್ಲಿ ಮಹೇಶ್ ಜೊತೆಗಿನ ಪೋಕಿರಿ ದೊಡ್ಡ ಹಿಟ್ ಆಗಿತ್ತು. ಮಹೇಶ್ ಅವರನ್ನು ಸೂಪರ್ ಸ್ಟಾರ್ ಮಾಡಿ ವೃತ್ತಿಬದುಕಿನಲ್ಲಿ ಅದ್ಧೂರಿ ಯಶಸ್ಸು ಗಳಿಸಿದ ಚಿತ್ರ ಪೋಕಿರಿ. ಇವರಿಬ್ಬರ ಕಾಂಬಿನೇಷನ್ ನಲ್ಲಿ ನಂತರ ಬಂದ ಬಿಜಿನೆಸ್ ಮ್ಯಾನ್ ಸಿನಿಮಾ ಕೂಡ ದೊಡ್ಡ ಹಿಟ್ ಆಗಿತ್ತು. ಈ ಎರಡು ಸಿನಿಮಾಗಳಲ್ಲಿ ಮಹೇಶ್ ಪಾತ್ರ ತುಂಬಾ ಚೆನ್ನಾಗಿದೆ. ಈ ಎರಡು ಚಿತ್ರಗಳನ್ನು ಅಭಿಮಾನಿಗಳಲ್ಲದೆ ಸಾಮಾನ್ಯ ಪ್ರೇಕ್ಷಕರೂ ಮೆಚ್ಚಿಕೊಂಡಿದ್ದಾರೆ. ಮತ್ತೊಮ್ಮೆ ಮಹೇಶ್-ಪೂರಿ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲೆಂದು ಅಭಿಮಾನಿಗಳು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪೂರಿ ಜಗನ್ನಾಥ್‌,  ”ಬಿಸಿನೆಸ್‌ಮ್ಯಾನ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವ ಆಲೋಚನೆ ಇದೆ. ನಾನು ಶೀಘ್ರದಲ್ಲೇ ಅದರ ಬಗ್ಗೆ ಯೋಚಿಸುತ್ತೇನೆ. ಈ ಹಿಂದೆ ನಾನು ಮತ್ತು ಮಹೇಶ್ ಪೋಕಿರಿ ಮತ್ತು ಬ್ಯುಸಿನೆಸ್‌ಮನ್ ಚಿತ್ರದ ಸೀಕ್ವೆಲ್‌ಗಳನ್ನು ಮಾಡಬೇಕು ಎಂದುಕೊಂಡಿದ್ದೆವು. ಆದರೆ ನಮ್ಮ ಇತರ ಸಿನಿಮಾ ಕಮಿಟ್‌ಮೆಂಟ್‌ಗಳಿಂದಾಗಿ ನಾವು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಆ ಎರಡು ಸಿನಿಮಾಗಳಲ್ಲಿನ ಪಂಡುಗಾಡು ಮತ್ತು ಸೂರ್ಯ ಭಾಯ್ ಪಾತ್ರಗಳು ನನಗೆ ತುಂಬಾ ಇಷ್ಟ. ಮಹೇಶ್ ಕೂಡ ಒಪ್ಪಿದರೆ ಖಂಡಿತಾ ಪೋಕಿರಿ ಮತ್ತು ಬ್ಯುಸಿನೆಸ್ ಮ್ಯಾನ್ ಸಿನಿಮಾಗಳ ಸೀಕ್ವೆಲ್ ಮಾಡುತ್ತೇನೆ. ಆದರೆ ಅದು ಯಾವಾಗ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ,’’ ಎಂದು ಹೇಳಿದರು. ಈ ಹೇಳಿಕೆ ಕೊಟ್ಟಾಗಿನಿಂದ ಪ್ರಿನ್ಸ್‌ ಅಭಿಮಾನಿಗಳು ಫುಲ್‌ ಜೋಶ್‌ನಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!