ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಷ್ಪ ಪೋಸ್ಟರ್ ರಿಲೀಸ್ ನಂತರ ತಂಡಕ್ಕೆ ಸಮಸ್ಯೆ ಶುರುವಾಗಿದೆ.
ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಅಲ್ಲು ಅರ್ಜುನ್ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು.
ಈ ಪೋಸ್ಟರ್ನಲ್ಲಿ ಅಲ್ಲು ಅರ್ಜುನ್ ಹಿಂದೂ ದೇವತೆಯ ರೂಪದಲ್ಲಿ ಕಾಣಿಸಿದ್ದಾರೆ. ಸೀರೆ, ಕುಂಕುಮ, ಬಳೆ, ಸರ, ಹಾರ, ಕೈಯಲ್ಲಿ ಗನ್ ಹಿಡಿದುಕೊಂಡಿದ್ದಾರೆ. ದೇವಿ ಅವತಾರ ತೊಟ್ಟು ಗನ್ ಹಿಡಿದಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ.
ಕಾಳಿಮಾತೆಯಂತೆ ವೇಷ ಧರಿಸಿರೋ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದ್ದು, ಬಾಯ್ಕಾಟ್ ಪುಷ್ಪ-2 ಕೂಗು ಜೋರಾಗಿದೆ. ಸಿನಿಮಾ ಫ್ಯೂಚರ್ ಏನಾಗಲಿದೆ ಎಂದು ತಿಳಿಯೋದಕ್ಕೆ ಕಾದು ನೋಡಬೇಕಿದೆ.