ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಕ್ಷಣ ಸಿನಿ ಅಭಿಮಾನಿಗಳಿಗೆಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರು ತಮ್ಮ ಮುಂಬರುವ ಚಿತ್ರ ಪುಷ್ಪ 2: ದಿ ರೈಸ್‌ನ ಹೊಸ ಪೋಸ್ಟರ್ ಬಿಡುಗಡೆ ಮೂಲಕ ಶುಭ ಹಾರೈಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಶ್ಮೀಕಾ ಮಂದಣ್ಣ, ತಮ್ಮ ಶ್ರೀವಲ್ಲಿ ಪಾತ್ರದ ಫಸ್ಟ್ ಲುಕ್ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಫೋಸ್ಟರ್ ನಲ್ಲಿ ಅಲ್ಲು-ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಗಂಡ- ಹಂಡತಿ ಪಾತ್ರದಲ್ಲಿ ರೊಮ್ಯಾಂಟಿಕ್ ಲುಕ್ ನಲ್ಲಿದ್ದಾರೆ. ಪುಷ್ಪಾ ರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ಪ್ರೀತಿಯಿಂದ ನೋಡುತ್ತಿರುವುದನ್ನು ಕಾಣಬಹುದು.
‘ನಿಮಗೂ, ನಿಮಗೂ ಕುಟುಂಬಕ್ಕೂ ಪುಷ್ಪ ರಾಜ್, ಶ್ರೀವಲ್ಲಿಯ ದೀಪಾವಳಿ ಶುಭಾಶಯಗಳು. Pushpa2 ಇದೇ ವರ್ಷ ಡಿಸೆಂಬರ್ 5 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಜ್ ಆಗಲಿದೆ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಕೂಡಾ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾ ನಿರ್ಮಿಸಿರುವ ಈ ಚಿತ್ರದಲ್ಲಿ ಅಲ್ಲು, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅವರು ಪುಷ್ಪ ರಾಜ್, ಶ್ರೀವಲ್ಲಿ ಮತ್ತು ಭನ್ವರ್ ಸಿಂಗ್ ಶೇಕಾವತ್ ಪಾತ್ರಗಳಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.