ನಾಳೆಯಿಂದ ಅಮೆಜಾನ್ ಪ್ರೈಮ್ ನಲ್ಲಿ ಪುಷ್ಪಾ ಹವಾ: ದುಬಾರಿ ಮೊತ್ತಕ್ಕೆ ಸೇಲ್ ಮಾಡಿದ ಚಿತ್ರತಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸೂಪರ್ ಹಿಟ್ ಸಿನಿಮಾ ಪುಷ್ಪ: ತೆರೆ ಮೇಲೆ ಭಾರೀ ಸದ್ದು ಮಾಡಿದ್ದು , ಇದೀಗ ಜನವರಿ 7 ರಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗಲಿದೆ‌.
ಈಗಾಗಲೇ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಿದ್ದ ಪುಷ್ಪಾ ಗಲ್ಲಾಪೆಟ್ಟಿಗೆಯ ದಾಖಲೆಗಳನ್ನು ಛಿದ್ರಗೊಳಿಸಿತ್ತು. ಅದರಲ್ಲೂ ಹಿಂದಿಯಲ್ಲೂ ಭಾರೀ ಹಿಟ್ ಆದ ಸಿನಿಮಾ ಸಖತ್ ಹಣ ಬಾಚಿಕೊಂಡಿತ್ತು.
ಇದೀಗ ಜನವರಿ 7 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಪುಷ್ಪಾ ಸದ್ದು ಮಾಡಲು ಹೊರಟಿದ್ದು, ಈ ಬಗ್ಗೆ ಅಮೆಜ಼ಾನ್ ಪ್ರೈಮ್ ನಿ ಜನವರಿ 5ನೇ ತಾರೀಖಿನಂದು ಅಧಿಕೃತವಾಗಿ ಘೋಷಿಸಿದೆ.
ಇನ್ ಸೈಡ್ ಮೂಲಗಳ ಪ್ರಕಾರ, ಪುಷ್ಪಾ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಸುಮಾರು 27-30 ಕೋಟಿ ರೂಪಾಯಿಗೆ ಖರೀದಿಸಿದೆ ಎಂಬ ಸುದ್ದಿ ವರದಿಯಾಗಿದೆ‌.
ಆದರೆ ಒಂದು ಚಿತ್ರದ ಸ್ಯಾಟಲೈಟ್ ರೈಟ್ಸ್ ಮೌಲ್ಯವು OTT ಒಪ್ಪಂದಕ್ಕಿಂತ ಹೆಚ್ಚಾಗಿರುತ್ತದೆ. ಆ ಪ್ರಕಾರ 40ಕೋಟಿ ದಾಟಬಹುದು ಎಂಬುವುದು ಸಿನಿಪಂಡಿತರ ಲೆಕ್ಕಾಚಾರ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!