ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಕ್ನೋದಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಆರನೇ ತರಗತಿ ವಿದ್ಯಾರ್ಥಿನಿ ಮನೆಗೆ ನುಗ್ಗಿ ಕೈಯಲ್ಲಿ ಚಾಕು ತೋರಿಸಿ ಆಕೆ ಹಣೆಗೆ ಕುಂಕುಮ ಇಟ್ಟು ಓಡಿ ಹೋಗಿದ್ದಾನೆ.
ಆರನೇ ತರಗತಿ ವಿದ್ಯಾರ್ಥಿನಿ ಚಾಕು ನೋಡಿ ಹೆದರಿದ್ದು, ಜೋರಾಗಿ ಕೂಗಿದ್ದಾಳೆ. ತಕ್ಷಣ ಜನ ಬಂದಿದ್ದು, ಆಕೆ ಹಣೆಗೆ ಕುಂಕುಮ ಇಟ್ಟು ಪರಾರಿಯಾಗಿದ್ದಾನೆ.
ಬಳಿಕ ಪೋಷಕರಿಗೆ ವಿದ್ಯಾರ್ಥಿನಿ ಮಾಹಿತಿ ನೀಡಿದ್ದು, ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯ ಮುಂದಿನ ಸಿಸಿಟಿವಿಯಲ್ಲಿ ಎಲ್ಲವೂ ರೆಕಾರ್ಡ್ ಆಗಿದೆ. ಬಾಲಕಿ ಕಸ ಗುಡಿಸುತ್ತಿದ್ದ ವೇಳೆ ಸೈಕಲ್‌ನಲ್ಲಿ ಇಬ್ಬರು ಬಾಲಕರು ಬಂದು, ಚಾಕು ತೋರಿಸಿದ್ದಾರೆ. ಬಾಲಕಿ ಹೆದರಿ ನಿಂತಾಗ ಹಣೆಗೆ ಕುಂಕುಮ ಇಟ್ಟು ಪರಾರಿಯಾಗಿದ್ದಾರೆ.
ಆಕೆಯನ್ನು ಪ್ರೀತಿಸುತ್ತಿದ್ದೇನೆ. ಅವಳನ್ನೇ ಮದುವೆಯಾಗುತ್ತೇನೆ ಎಂದು ಬಾಲಕ ಠಾಣೆಯಲ್ಲಿ ಹೇಳಿದ್ದಾನೆ. ಮೂರು ತಿಂಗಳಿನಿಂದ ಬಾಲಕಿಯ ಸುತ್ತಮುತ್ತ ಓಡಾಡಿ ಈತ ಪ್ರಪೋಸ್ ಮಾಡಿ ಕಿರುಕುಳ ನೀಡಿದ್ದ. ವಿಷಯ ತಿಳಿದ ಬಾಲಕಿ ಪೋಷಕರು ಆಕೆಯನ್ನು ಬೇರೆ ಶಾಲೆಗೆ ಸೇರಿಸಿದ್ದರು, ಆದರೂ ಬಾಲಕ ಆಕೆಯನ್ನು ಹುಡುಕಿ ಮನೆಯ ಬಳಿ ಬಂದಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.