ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರೋ ಡ್ರಗ್ ದಂಧೆ ನಿಲ್ಲಿಸಿ: ಕುಮಾರಸ್ವಾಮಿ ಆಗ್ರಹ

ಹೊಸದಿಗಂತ ವರದಿ ಕಲಬುರಗಿ: 

ಶಾಲಾ-ಕಾಲೇಜುಗಳ ಮುಂದೆ ಡ್ರಗ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು,ಸಣ್ಣ ಸಣ್ಣ ಮಕ್ಕಳು ಡ್ರಗ್ ದಂಧೆಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಶಾಲಾ ಮಕ್ಕಳಿಗೆ ಎನ್.ಇ.ಪಿ.ತರುವ ಬದಲು ಡ್ರಗ್ ದಂಧೆಗೆ ಕಡಿವಾಣ ಹಾಕುವ ಕೆಲಸ ಸಕಾ೯ರದಿಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಕಾ೯ರಕ್ಕೆ ಆಗ್ರಹಿಸಿದರು.

ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎಗ್ಗಿಲ್ಲದೆ ನಡೆದಿರುವ ಡ್ರಗ್ ದಂಧೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಒಂದುವರೇ ವಷ೯ದ ಹಿಂದೆ ದೊಡ್ಡ ಮಟ್ಟದಲ್ಲಿ ಡ್ರಗ್ ಸುದ್ದಿಯಾಗಿತ್ತು. ಚಿತ್ರ ರಂಗದ ಇಬ್ಬರು ನಟಿಯರು ಕೂಡ ಬಂಧನವಾಗಿ ಜೈಲಿಗೆ ಹೋಗಿದ್ದ ಪ್ರಸಂಗ ನಡೆದಿದೆ.ಡ್ರಗ್ ದಂಧೆ ಮಾಡುವ ಬೇರೆ ಬೇರೆಯವರು ಬಂಧನವಾಗಿದ್ದಾರೆ.ಆದರೆ ಅವರೆಲ್ಲ ಎನಾದರೂ ಗೊತ್ತಿಲ್ಲ. ಅವರ ಬಗ್ಗೆ ಬಿ-ರಿಪೋರ್ಟ್ ಹಾಕಿದ್ದಾರೋ, ಅಥವಾ ಸಿ-ರಿಪೋರ್ಟ್ ಹಾಕಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

ನಾನು ಅಂದೆ ಈ ಡ್ರಗ್ಸ್ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದೆ,ಈ ಪ್ರಕರಣವನ್ನು ಹಳ್ಳ ಹಿಡಿಸುತ್ತಾರೆಂದು.ಇವತ್ತು ಮತ್ತೆ ಸ್ವೇಚ್ಛಾಚಾರವಾಗಿ ಡ್ರಗ್ ದಂಧೆ ನಡೆಯುತ್ತಿ ಎಂದರು.

ಎನ್.ಇ.ಪಿ.ವಿಚಾರವಾಗಿ ಮಾತನಾಡಿದ ಅವರು, ಮೊನ್ನೆ ಪರಮ ಪೂಜ್ಯರ ಜೊತೆಗೆ ಪಠ್ಯ ಪುಸ್ತಕಗಳಲ್ಲಿ ಎನ್ ಇರಬೇಕು ಎನ್ ಇರಬಾರದು ಎಂಬುರ ಬಗ್ಗೆ ಸಕಾ೯ರ ಸಭೆ ನಡೆಸಿದೆ. ನಮ್ಮ ಸಂಸ್ಕೃತಿ ಉಳಿಯುವುದಕ್ಕೆ ಯಾವ ವಿಷಯಗಳು ಇಡಬೇಕು ಎನ್ನುವದರ ಬಗ್ಗೆ ಸುದೀರ್ಘ ಚಚೆ೯ ನಡೆದಿದೆ.ಆದರೆ ಇದನ್ನೆಲ್ಲಾ ಆಮೇಲೆ ಮಾಡಲಿ.ಮೊದಲು ಡ್ರಗ್ಸ್ ದಂಧೆಗೆ ಕಡಿವಾಣ ಹಾಕಬೇಕು ಎಂದರು.

ಡ್ರಗ್ ದಂಧೆ ನಡೆಸುವವರು ಪೋಲಿಸ್ ಇಲಾಖೆಯ ಜೊತೆಗೆ ಇರುತ್ತಾರೆ. ಪೋಲಿಸರಿಗೆ ಎಲ್ಲವೂ ಮಾಹಿತಿ ಇದೆ.ಪೋಲಿಸರು, ದುಡ್ಡು ಕೊಟ್ಟು ಬಂದವರನ್ನು ಎನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಮುಂಬರುವ ದಿನಗಳಲ್ಲಿ ಚುನಾವಣೆ ಇಟ್ಟುಕೊಂಡು ಇವಾಗ ಎನೋ ಮಾಡಲು ಹೊರಟಿದ್ದು,ಆಮೇಲೆ ನಂತರದಲ್ಲಿ ಮಾಡಲಿ,ಮೊದಲು ಶಾಲಾ ಮಕ್ಕಳು ಹಾಳಾಗುವುದನ್ನು ನಿಲ್ಲಿಸಲಿ ಎಂದು ಸಕಾ೯ರಕ್ಕೆ ತಾಕೀತು ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!