ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೈಮರಿ ಸ್ಕೂಲ್‌ನ ಬಾಲೆಯೊಬ್ಬಳು ತನ್ನ ತಂದೆಯನ್ನು ಕೂರಿಸಿಕೊಂಡು ಸ್ಕೂಟಿಯಲ್ಲಿ ಹೋಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಔರಂಗಬಾದ್ ಇನಸೈಡರ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಇಂತಹವುಗಳು ನಿಜವಾಗಿಯೂ ಸ್ವೀಕಾರರ್ಹವೇ ಎಂದು ಪ್ರಶ್ನಿಸಿದ್ದಾರೆ. ಛತ್ರಪತಿ ಶಂಭಾಜಿನಗರದ ಶಾಕಿಂಗ್ ದೃಶ್ಯಾವಳಿ ಇದು ಎಂದು ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಅಪ್ಪ ಮಗಳನ್ನು ಮುಂದೆ ಕೂರಿಸಿಕೊಂಡು ತಲೆಗೆ ಹೆಲ್ಮೆಟ್ ಕೂಡ ಹಾಕದೇ ಸ್ಕೂಟರ್ ಓಡಿಸುತ್ತಿರುವುದನ್ನು ಕಾಣಬಹುದಾಗಿದೆ.
ಈ ವೀಡಿಯೋ ನೋಡಿದ ಅನೇಕರು, ತಂದೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿನ ಮೇಲೆ ಆಕ್ರೋಶ ಬೇಡ ಪೋಷಕರು ಜವಾಬ್ದಾರಿಯುತವಾಗಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಲವು ಅಪಘಾತಗಳಿಗೆ ಇದು ಕಾರಣ, ಇದು ಯಾವ ರೀತಿಯ ಪೇರೆಂಟಿಂಗ್ ಎಂಬುದು ನಮಗೆ ತಿಳಿದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಹೆಲ್ಮೆಟ್ ಎಲ್ಲಿ ಸರ್, ಅವರು ಹೆಲ್ಮೆಟ್ ಧರಿಸಿಲ್ಲ, ಮಗಳಿಗೂ ಹೆಲ್ಮೆಟ್ ತೊಡಿಸಿಲ್ಲ ಎಂದು ಹೇಳಿದ್ದಾರೆ.
View this post on Instagram