ಮರಿಯಪೋಲ್‌ ನಾಗರೀಕರ ಸ್ಥಳಾಂತರಕ್ಕೆ ಪುಟಿನ್‌ ಸಮ್ಮತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯುಎನ್‌ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ರಷ್ಯಾದ ಪುಟಿನ್‌ ಅವರೊಂದಿಗೆ ಸಭೆ ನಡೆಸಿದ್ದು ನಾಗರೀಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕುರಿತು ಪ್ರಸ್ತಾಪಿಸಿದ್ದು ಅದಕ್ಕೆ ಪುಟಿನ್‌ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಮರಿಯ ಪೋಲ್‌ ನ ಅಜೋವ್‌ ಸ್ಟಾಲ್ ಉಕ್ಕಿನ ಕಾರ್ಖಾನೆಯಲ್ಲಿ ಸಿಲುಕಿರುವ ನಾಗರೀಕರನ್ನು ಸ್ಥಳಾಂತರಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌ ಒಪ್ಪಿಗೆ ನೀಡಿದ್ದಾರೆ ಎಂದು ವಿಶ್ವ ಸಂಸ್ಥೆ ಹೇಳಿದೆ.

ಈ ಕುರಿತು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್‌ ಡ್ಯೂರಿಕ್‌ ಹೇಳಿಕೆ ನೀಡಿದ್ದು “ರಷ್ಯಾದ ರಕ್ಷಣಾ ಸಚಿವಾಲವು ನಾಗರೀಕರ ಸ್ಥಳಾಂತಕ್ಕೆ ಒಪ್ಪಿಗೆ ನೀಡಿದ್ದು ಮರಿಯ ಪೋಲ್‌ ನಲ್ಲಿ ರಕ್ಷಣಾಕಾರ್ಯಕ್ಕೆ ರಷ್ಯಾ ಸೇನೆಯು ಅಡ್ಡಿ ಪಡಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ವಿಶ್ವಸಂಸ್ಥೆ ಮತ್ತು ರೆಡ್‌ಕ್ರಾಸ್‌ ನ ಅಂತರಾಷ್ಟ್ರೀಯ ಸಮಿತಿಗಳು ಜಂಟಿಯಾಗಿ ಮರಿಯ ಪೋಲ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ವಿಶ್ವ ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!