ಪುಟಿನ್‌ ಗೆ ಯುದ್ಧದಿಂದ ಹೊರಬರುವ ದಾರಿ ತಿಳಿದಿಲ್ಲ: ಜೋ ಬೈಡನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಯುಧ್ದದಿಂದ ಹೊರಬರುವ ದಾರಿ ತಿಳಿದಿಲ್ಲ ಎಂದು ಅಮೇರಿಕದ ಅಧ್ಯಕ್ಷ ಜಿಯೋ ಬೈಡನ್‌ ಟೀಕಿಸಿದ್ದಾರೆ. ಯುದ್ಧದಿಂದ ಕಷ್ಟದಲ್ಲಿರುವ ಉಕ್ರೇನ್‌ಗೆ ಹೆಚ್ಚಿನ ಸಹಾಯ ನೀಡುವ ಕಾಯ್ದೆಗೆ ಸಹಿ ಹಾಕುವ ಸಂದರ್ಭದಲ್ಲಿ ಮಾತನಾಡಿದ ಅವರು “ಪುಟಿನ್‌ ಒಬ್ಬ ಲೆಕ್ಕಾಚಾರದ ವ್ಯಕ್ತಿ. ಆದರೆ ಯುದ್ಧದಿಂದ ನ್ಯಾಟೋ ಮತ್ತು ಯುರೋಪಿಯನ್‌ ಒಕ್ಕೂಟವನ್ನು ಒಡೆಯಬಹುದು ಎಂಬ ಅವರ ಎಣಿಕೆ ಹುಸಿಯಾಗಿದೆ” ಎಂದಿದ್ದಾರೆ.

ಯುದ್ಧದಿಂದ ಜರ್ಜರಿತವಾಗಿರುವ ದೇಶಕ್ಕೆ ಸಹಾಯ ಮಾಡಲು ಲೆಂಡ್ ಲೀಸ್ ಆಕ್ಟ್ 2022 ಗೆ ವಾಷಿಂಗ್ಟನ್ ನಲ್ಲಿ ಸಹಿ ಹಾಕಿ ಮಾತನಾಡಿದ ಅವರು “ಪುಟಿನ್‌ ಅವರ ಕ್ರೂರ ಯುದ್ಧದ ವಿರುದ್ಧ ಉಕ್ರೇನ್ ಸರ್ಕಾರ ಮತ್ತು ಉಕ್ರೇನಿಯನ್ ಜನರನ್ನು ರಕ್ಷಿಸುವ ಹೋರಾಟವನ್ನು ಬೆಂಬಲಿಸಲು ಅಮೆರಿಕ ಮಹತ್ವದ ನಿರ್ಣಯ ತೆಗೆದುಕೊಂಡಿದೆ ಮತ್ತು ಕಷ್ಟದಲ್ಲಿರುವ ಉಕ್ರೇನಿಯರಿಗೆ ಹೆಚ್ಚಿನ ಸಹಾಯ ಒದಗಿಸಲು ತನ್ನ ಸಹಾಯ ಹಸ್ತಚಾಚಿದೆ” ಎಂದು ಹೇಳಿದ್ದಾರೆ.

ಈ ಕಾಯಿದೆಯ ಕುರಿತಾಗಿ “ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಅಮೆರಿಕವು ಇದೇ ಲೆಂಡ್‌ ಲೀಸ್‌ ಆಕ್ಟ್‌ ಮೂಲಕ ತನ್ನ ಮಿತ್ರ ರಾಷ್ಟ್ರಗಳಿಗೆ ಸಹಾಯ ನೀಡಿದೆ. ಪ್ರಸ್ತುತ ಕೀವ್‌ ಗಾಗಿ ಅದೇ ಕಾಯಿದೆಗೆ ಮರುಜೀವ ನೀಡುವ ಮೂಲಕ ಅಮೆರಿಕ ಸಹಾಯ ಹಸ್ತ ಚಾಚಿದೆ” ಎಂದು ಶ್ವೇತಭವನ ಹೇಳಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!