ಮೋದಿ ನಿಜವಾದ ದೇಶಭಕ್ತ: ಪ್ರಧಾನಿಯನ್ನು ಹೊಗಳಿದ ರಷ್ಯಾ ಅಧ್ಯಕ್ಷ ಪುಟಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾದ ದೇಶಭಕ್ತ ಎಂದು ಹೊಗಳಿದ್ದಾರೆ. ಭಾರತದ ಪ್ರಧಾನಿಯವರ ಸ್ವತಂತ್ರ ವಿದೇಶಾಂಗ ನೀತಿ ಮತ್ತು ‘ಮೇಕ್ ಇನ್ ಇಂಡಿಯಾ’‌ ಮಹತ್ವಾಕಾಂಕ್ಷೆಯನ್ನು ಪುಟಿನ್ ಶ್ಲಾಘಿಸಿದರು.

ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪುಟಿನ್, ಈ ಸಂದರ್ಭದಲ್ಲಿ ಮೋದಿಯವರು ಆಡಳಿತವನ್ನು ಹಾಡಿ ಹೊಗಳಿದರು. “ತಮ್ಮ ದೇಶ ಮತ್ತು ಜನರಿಗೆ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುವ ಕೆಲವೇ ಕೆಲವು ವಿಶ್ವ ನಾಯಕರಲ್ಲಿ ಮೋದಿ ಒಬ್ಬರು. ಎಷ್ಟೇ ಕಷ್ಟಗಳು ಎದುರಾದರೂ ತನ್ನ ಗುರಿಯನ್ನು ಸಾಧಿಸುವಲ್ಲಿ ಮುನ್ನಡೆಯುತ್ತಿದ್ದಾರೆ. ಭಾರತದಂತಹ ದೇಶಗಳಿಗೆ ಉಜ್ವಲ ಭವಿಷ್ಯವಿದೆ. ಮೇಲಾಗಿ ವಿಶ್ವ ರಾಜಕೀಯದಲ್ಲಿ ಭಾರತ ಬಹುಮುಖ್ಯ ಪಾತ್ರ ವಹಿಸುತ್ತದೆ. ಭಾರತದೊಂದಿಗೆ ನಮಗೆ ಯಾವುದೇ ರೀತಿಯ ತೊಂದರೆಯಿಲ್ಲ. ಎಲ್ಲ ವಿಷಯಗಳಲ್ಲೂ ಪರಸ್ಪರ ಸಹಕಾರ ನೀಡುತ್ತಿದ್ದೇವೆ. ಮುಂದೆಯೂ ಇದೇ ಸಹಕಾರ ಮುಂದುವರಿಯಲಿದೆ. ಪ್ರಧಾನಿ ಮೋದಿಯವರ ಮನವಿಯಂತೆ ಭಾರತಕ್ಕೆ ರಸಗೊಬ್ಬರ ಪೂರೈಕೆಯನ್ನೂ ಹೆಚ್ಚಿಸಿದ್ದೇವೆ. ಭಾರತದ ಕೃಷಿ ಕ್ಷೇತ್ರದ ಪ್ರಗತಿಗೆ ಇದು ತುಂಬಾ ಉಪಯುಕ್ತವಾಗಿದೆ ಎಂದರು.

ಪ್ರಸ್ತುತ, ನಾವು ಭಾರತಕ್ಕೆ 7.6 ಪಟ್ಟು ಹೆಚ್ಚು ರಸಗೊಬ್ಬರವನ್ನು ಪೂರೈಸುತ್ತಿದ್ದೇವೆ ಎಂದರು. ಮತ್ತೊಂದೆಡೆ, ರಷ್ಯಾ ಉಕ್ರೇನ್ ಮೇಲೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಯಾವುದೇ ಉದ್ದೇಶವನ್ನು ರಷ್ಯಾ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!