ನ್ಯಾಟೋದೊಂದಿಗೆ ಸೇರಿದರೆ ರಷ್ಯಾ-ಫಿನ್‌ಲ್ಯಾಂಡ್‌ ಸಂಬಂಧಕ್ಕೆ ತೊಂದರೆ: ಪುಟಿನ್‌ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫೀನ್ಲ್ಯಾಂಡ್‌ ದೇಶವು ನ್ಯಾಟೋ ಸದಸ್ಯತ್ವ ಪಡೆದುಕೊಳ್ಳಲು ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಫಿನ್‌ಲ್ಯಾಂಡ್‌ ನ್ಯಾಟೋ ಸದಸ್ಯತ್ವಕೆ ಅರ್ಜಿ ಸಲ್ಲಿಸುವುದನ್ನು ಮುಂದುವರೆಸಿದರೆ ರಷ್ಯಾದೊಂದಿಗಿನ ಸಂಬಂಧದ ಮೇಲೆ ಅದು ʼಋಣಾತ್ಮಕ ಪರಿಣಾಮ ಬೀರುತ್ತದೆʼ ಎಂದು ಪುಟಿನ್‌ ಹೇಳಿದ್ದಾರೆ.

ಈ ಕುರಿತು ರಷ್ಯಾದ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ “ರಷ್ಯಾದೊಂದಿಗೆ ನೆರೆಯ ರಾಷ್ಟ್ರ ಫಿನ್‌ಲ್ಯಾಂಡ್‌ ಉತ್ತಮ ಸಂಬಂಧ ಹೊಂದಿದೆ. ಆದರೆ ಅದರ ವಿದೇಶಾಂಗ ನೀತಿಗಳಲ್ಲಿ ಈ ರೀತಿಯ ಬದಲಾವಣೆಗಳು ಉಭಯ ದೇಶಗಳ ನಡುವೆ ಸಂಬಂಧ ಹಳಸುವುದಕ್ಕೆ ಕಾರಣವಾಗುತ್ತದೆ. ಉತ್ತಮವಾಗಿ ಬೆಸೆದುಕೊಂಡಿರುವ ನೆರೆಹೊರೆಯ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು” ಎಂದು ರಷ್ಯಾ ಅಧ್ಯಕ್ಷ ಪುಟಿನ್‌ ಫಿನ್‌ಲ್ಯಾಂಡ್‌ನ ನೈನಿಸ್ಟೊಗೆ ಹೇಳಿದ್ದಾರೆ.

ರಷ್ಯಾದೊಂದಿಗೆ ಸಂಕೀರ್ಣ ಸಂಬಂಧ ಹೊಂದಿರುವ ಆಲಿಪ್ತ ರಾಷ್ಟ್ರ ಫಿನ್‌ಲ್ಯಾಂಡ್‌ ಫೋನ್‌ ಸಂಭಾಷಣೆಯಲ್ಲಿ ಪುಟಿನ್‌ ಗೆ ಈ ಕುರಿತು ವಿಷಯ ತಿಳಿಸಿದ ನಂತರದಲ್ಲಿ ಈ ಪ್ರತಿಕ್ರಿಯೆ ಬಂದಿದ್ದು “ರಷ್ಯಾವು ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ ನಂತರ ಫಿನ್‌ಲ್ಯಾಂಡ್‌ನ ಭದ್ರತಾ ಸನ್ನಿವೇಶವೂ ಬದಲಾಗಿದೆ. ಈ ಕುರಿತು ನ್ಯಾಟೋ ಸದಸ್ಯತ್ವ ಪಡೆಯಲು ಚಿಂತಿಸಲಾಗಿದೆ” ಎಂದು ಫಿನ್‌ಲ್ಯಾಂಡ್‌ ಹೇಳಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!