ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಫಿನಾಡು ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯಲ್ಲಿ ಮಳೆ ಸುರಿಯುತ್ತಿದ್ದು, ಪುಟ್ಟ ಪುಟ್ಟ ಜಲಪಾತಗಳು ಸೃಷ್ಟಿಯಾಗಿವೆ. ಇದನ್ನು ನೋಡಲೆಂದೇ ಜನ ಚಾರ್ಮಾಡಿ ಘಾಟ್ ರೌಂಡ್ ಹಾಕುತ್ತಿದ್ದಾರೆ.
ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರೋ ಜಲಪಾತದ ವೈಭವವನ್ನ ಕಣ್ತುಂಬಿಕೊಳ್ಳಲು ಜನರು ಮುಗಿಬೀಳ್ತಿದ್ದು ಅಪಾಯಗಳು ಸಂಭವಿಸದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ.
ಬೆಳಗ್ಗೆಯೇ ಅಂತಲ್ಲ, ದಿನದ ಯಾವುದೇ ಸಮಯದಲ್ಲಿಯೂ ಜನ ತುಂಬಿದ್ದಾರೆ. ಕಾಫಿನಾಡು ಹಸಿರಿನ ಸೊಬಗಿನಿಂದ ಮೈದುಂಬಿಕೊಂಡಿದ್ದು, ಹಸಿರಿನ ನಡುವೆ ಝಳ, ಝಳ ನೀರಿನ ಸದ್ದಿನ ಸಪ್ಪಳ, ಆಗಸದಿಂದ ಧರೆಗೆ ಮುತ್ತಿಕ್ಕುತ್ತಿರೋ ಮಳೆ ಹನಿಗಳ ಸಪ್ಪಳ ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಇದನ್ನು ಅನುಭವಿಸಲು ಪ್ರಯಾಣಿಕರು ಜಲಪಾತಗಳ ಬಳಿ ಒಂದು ಸ್ಟಾಪ್ ಮಿಸ್ ಮಾಡದೆ ಮಾಡುತ್ತಿದ್ದಾರೆ.
ಈ ದಾರಿಯಲ್ಲಿ ಸಾಗೋ ವಾಹನ ಸವರಾರು ತಮ್ಮ ವಾಹನಗಳನ್ನ ನಿಲ್ಲಿಸಿ ಸೆಲ್ಫಿ ತೆಗೆದುಕೊಂಡು, ಜಲಪಾತದ ಫೋಟೋ ಕ್ಲಿಕಿಸಿಕೊಂಡು ಮಜಾ ಮಾಡ್ತಾರೆ. ಹೀಗಾಗಿ ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸರು ವಾಹನ ನಿಲುಗಡೆಗೆ ಬ್ರೇಕ್ ಹಾಕಿದ್ದಾರೆ. ಜಲಪಾತದ ಬಳಿಯೇ ಹೈವೇ ಪಟ್ರೋಲ್ ಪೊಲೀಸರನ್ನ ನಿಯೋಜಿಸಿದ್ದಾರೆ.