ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೋನ್ ಚಾರ್ಜ್ ಮಾಡಲು ಹೋದಾಗ ವಿದ್ಯುತ್ ಶಾಕ್ ಹೊಡೆದಿದ್ದು, ಬೆಂಗಳೂರಿನಲ್ಲಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಜಾಜಿನಗರ ಬಳಿಯ ಮಂಜುನಾಥ್ ನಗರದ ಪಿಜಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಶ್ರೀನಿವಾಸ್ (24) ಎಂದು ಗುರುತಿಸಲಾಗಿದ್ದು, ಈತ ಬಿದರ್ ಮೂಲದವನು.
ಶ್ರೀನಿವಾಸ್, ಬೀದರ್ ನಿಂದ ಬೆಂಗಳೂರಿಗೆ ಬಂದು ಸಾಫ್ಟ್ ವೇರ್ ಕೋರ್ಸ್ ಮಾಡುತ್ತಿದ್ದ. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಪಿಜಿಯಲ್ಲಿ ತನ್ನ ಮೊಬೈಲ್ ಚಾರ್ಜ್ ಹಾಕಲು ಹೋಗಿದ್ದಾನೆ. ಈ ವೇಳೆ ಎಲೆಕ್ಟ್ರಿಕ್ ಶಾಕ್‍ನಿಂದ ಆತ ಮೃತಪಟ್ಟಿದ್ದಾನೆ.