ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ಹಿರಿಯ ನಿರ್ದೇಶಕ, ಪುಟ್ಟಣ್ಣ ಕಣಗಾಲ್ ಅವರ ಶಿಷ್ಯ ಭಾರತಿ ರಾಜ ವಯೋಸಹಜ ಸಮಸ್ಯೆಗಳಿಂದ ಇಂದು ಕೊನೆಯುಸಿರೆಳೆದಿದ್ದಾರೆ.
ವೃದ್ಧಾಪ್ಯ ಹಾಗೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಭಾರತಿ ರಾಜು ಇಂದು ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1977ರ ತಮಿಳು ಚಿತ್ರ ’16 ವಯತಿನಿಲೆ’ ಮೂಲಕ ಭಾರತಿ ರಾಜ ನಿರ್ದೇಶಕರಾದರು. ಅದಾದ ನಂತರ, ಅವರು ‘ಕಿಲಕ್ಕೆ ಪೋಗಮ್ ರೈಲ್’, ‘ಸಿಗಪ್ಪು ರೋಜಕ್ಕಲ್’, ‘ಅಲೈಗಲ್ ಒಯಿವತಿಲ್ಲೈ’, ‘ಕಾದಲ್ ಓವಿಯಂ’, ‘ಮುದಲ್ ಮರಿಯಥೈ’ ಮತ್ತು ಇತರ ಸೂಪರ್ ಹಿಟ್ ಚಿತ್ರಗಳನ್ನು ತಮಿಳು ಪ್ರೇಕ್ಷಕರಿಗೆ ನೀಡಿದರು.
ವಿಶೇಷ ಎಂದರೆ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಬಳಿ ಭಾರತಿ ರಾಜ ಕೆಲಸ ಕಲಿತಿದ್ದರು. ಪುಟ್ಟಣ್ಣ ಕಣಗಾಲ್ ಬಳಿ ಸಹಾಯಕ ನಿರ್ದೇಶಕರಾಗಿ ಅವರು ಕೆಲಸ ಮಾಡಿದ್ದರು. ಆದಾಗ್ಯೂ ಭಾರತಿ ರಾಜ ಅವರು ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿಲ್ಲ. ಭಾರತಿರಾಜ ಅವರ ನಿಧನಕ್ಕೆ ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ.



