ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾ ಓಪನ್ ಟೂರ್ನಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಅಸ್ಮಿತಾ ಚಲಿಹಾ ವಿರುದ್ಧ 21-7, 21-18 ಸೆಟ್‌ಗಳಿಂದ ಗೆಲುವು ದಾಖಲು ಮಾಡಿ ಸೆಮಿಫೈನಲ್‌ಗೆ ಎಂಟ್ರಿ ಪಡೆದರು.
ಪಿ.ವಿ.ಸಿಂಧು ಭಾರತದ ಸಹ ಶಟ್ಲರ್ ಇರಾ ಶರ್ಮಾ ವಿರುದ್ಧ 21-0, 21-10 ಗೇಮ್ಗಳ ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಆಶ್ಮಿತಾ ತಮ್ಮ 2ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ನ ಯೆಲ್ಲೆ ಹೊಯಾಕ್ಸ್ ವಿರುದ್ಧ 21-17, 21-14ರ ಅಂತರದಲ್ಲಿ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಅರ್ಹತೆ ಪಡೆದಿದ್ದರು.
ಸಿಂಧು ಹೊರತುಪಡಿಸಿ, ಶಟ್ಲರ್ʼ ಳಾದ ಲಕ್ಷ್ಯ ಸೇನ್ ಮತ್ತು ಆಕರ್ಷಿ ಕಶ್ಯಪ್ ಸೆಮೀಸ್ʼಗೆ ಪ್ರವೇಶಿಸಿದ್ದಾರೆ.