ʼಕ್ವಾಡ್ʼ ಅತ್ಯಂತ ಕಡಿಮೆ ಅವಧಿಯಲ್ಲಿ ಜಾಗತಿಕವಾಗಿ ಪ್ರಭಾವಶಾಲಿ ಸ್ಥಾನಪಡೆದಿದೆ: ಪ್ರಧಾನಿ ಮೋದಿ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಟೋಕಿಯೋದಲ್ಲಿ ಆಯೋಜನೆಗೊಂಡಿರುವ ಕ್ವಾಡ್‌ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ್ದು, ʼಕ್ವಾಡ್ʼ ಅತ್ಯಂತ ಕಡಿಮೆ ಅವಧಿಯಲ್ಲಿ ಜಾಗತಿಕ ವೇದಿಕೆಯಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿಕೊಂಡಿದೆ. “ಇಂದು, ಕ್ವಾಡ್‌ ನ ವ್ಯಾಪ್ತಿ ಹೆಚ್ಚಾಗಿದೆ ಮತ್ತು ಅದು ಅತ್ಯಂತ ಪ್ರಭಾವಶಾಲಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಕ್ವಾಡ್‌ನ ಸದಸ್ಯರ ನಡುವಿನ ಸಮನ್ವಯವು ಇಂಡೋ-ಪೆಸಿಫಿಕ್‌ ಭಾಗದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಕಾಪಾಡುತ್ತಿದೆ. ಕ್ವಾಡ್‌ ರಾಷ್ಟ್ರಗಳು ರಚನಾತ್ಮಕ ಕಾರ್ಯಸೂಚಿಯನ್ನು ಹೊಂದಿವೆ. ಇದರಿಂದಾಗಿ ಈ ರಾಷ್ಟ್ರಗಳು ಜಾಗತಿಕವಾಗಿ ʼಸಾಕಾರಾತ್ಮಕʼ ಶಕ್ತಿಯಾಗಿ ಹೊರಹೊಮ್ಮುತ್ತಿವೆ ಎಂದರು.
ಇಂಡೋ – ಪೆಸಿಫಿಕ್​ ಪ್ರದೇಶದಲ್ಲಿ ಆರ್ಥಿಕ ಸವಾಲುಗಳನ್ನು ಎದುರಿಸಲು ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯತೆ ಬಗ್ಗೆ ಒತ್ತಿ ಹೇಳಿದ ಮೋದಿ, ಭಾರತ ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್​ ಪ್ರದೇಶಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಕಾರ್ಯಸೂಚಿ ಅನುಸರಿಸುತ್ತಿದೆ. ಶಾಂತಿ, ಸಮೃದ್ಧಿಯ ಗುರಿಯೊಂದಿಗೆ ನಾವು ಕ್ವಾಡ್‌ ಪಾಲುದಾರರ ನಡುವೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಕೊರೋನಾದಂತಹ ಕಷ್ಟಕರ ಸಂದರ್ಭಗಳೆದುರಾದರೂ ನಾವು ಲಸಿಕೆ ವಿತರಣೆ, ಹವಾಮಾನ, ವಿಪತ್ತು ನಿರ್ವಹಣೆ ಹಾಗೂ ಆರ್ಥಿಕ ಸಹಕಾರದಂತಹ ಹಲವಾರು ಮಹತ್ವದ ಕ್ಷೇತ್ರಗಳಲ್ಲಿ ಪರಸ್ಪರ ಸಮನ್ವಯವನ್ನು ಹೆಚ್ಚಿಸಿದ್ದೇವೆ” ಎಂದು ಹೇಳಿದರು.
ಕ್ವಾಡ್ ಸದಸ್ಯರ ನಡುವಿನ ಪರಸ್ಪರ ನಂಬಿಕೆ ಹಾಗೂ ಒಮ್ಮತದ ನಿರ್ಣಯವು “ಪ್ರಜಾಪ್ರಭುತ್ವ ಶಕ್ತಿಗಳಿಗೆ ಉತ್ಸಾಹ ಮತ್ತು ಬಲ ಮೂಡಿಸುವ ಸಂಗತಿಯಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!