SHOCKING | ಬಾಯ್‌ಫ್ರೆಂಡ್‌ ಜೊತೆ ಜಗಳ, ಸಿಟ್ಟಿನಲ್ಲಿ ಆತನೆದುರೇ ರೈಲಿಗೆ ತಲೆಕೊಟ್ಟ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಆಗ್ರಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.  ಗೆಳೆಯನ ಜತೆ ವಾದ ಮಾಡುತ್ತಿದ್ದ ಯುವತಿಯೊಬ್ಬಳು ನೋಡುತ್ತಿದ್ದಂತೆಯೇ ರೈಲಿನ ಮುಂದೆ ಹಾರಿ ಪ್ರಾಣ ಬಿಟ್ಟಿದ್ದಾಳೆ.

ಆಗ್ರಾದ ರಾಜಾ ಕಿ ಮಂಡಿರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಫ್ಲಾಟ್‌ಫಾರಂ ಸಂಖ್ಯೆ 1 ರಲ್ಲಿ ಯುವತಿ ಗೆಳೆಯನ ಜತೆ ಕುಳಿದ್ದಳು. ನಂತರ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಪರಸ್ಪರ ಜಗಳ ನಡೆಯುವಾಗ ಏಕಾ ಏಕಿ ರೈಲ್ವೆ ಟ್ರ್ಯಾಕಿನ ಮೇಲೆ ಹಾರಿ ಜಗಳ ನಡೆಸುತ್ತಾಳೆ.

ಅದೇ ಸಂದರ್ಭದಲ್ಲಿ ಯುವತಿ ಇದ್ದ ಟ್ರ್ಯಾಕಿನ ಮೇಲೆ ಕೇರಳದ ಎಕ್ಸ್‌ಪ್ರೆಸ್ ರೈಲು ವೇಗವಾಗಿ ಬಂದಿದೆ, ಇದನ್ನು ಗಮನಿಸಿದ ಯುವತಿ ಫ್ಲಾಟ್‌ಫಾರ್ಮ್ ಮೇಲೆ ಹೋಗಲು ಪ್ರಯತ್ನಿಸಿದರೂ ಸಾಧ್ಯವಾಗದೆ ಆಕೆಯ ಮೇಲೆ ರೈಲು ಹರಿದುಹೋಗಿದೆ.

ಆಕೆ ತೀವ್ರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆತರಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!