RECIPE| ತಿಂಡಿಗೂ ಸೈ.. ಊಟಕ್ಕೂ ಸೈ..ಹೀಗೆ ಮಾಡಿ ನಿಂಬೆರೈಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಭಾರತದ ಪ್ರಸಿದ್ಧ ಆಹಾರಗಳಲ್ಲಿ ನಿಂಬೆರೈಸ್‌ ಅಥವಾ ನಿಂಬೆ ಚಿತ್ರಾನ್ನ. ಇದು ಭೋಜನದೊಂದಿಗೆ ಅಥವಾ ಬೆಳಗ್ಗಿನ ಉಪಾಹಾರವಾಗಿಯೂ ಸೇವಿಸಬಹುದು. ಸರಳವಾಗಿ, ಅಷ್ಟೇ ರುಚಿ ರುಚಿಯಾಗಿ ಚಿತ್ರನ್ನಾವನ್ನು ಈ ರೀತಿ ಮಾಡಿ. ಚಿತ್ರಾನ್ನವನ್ನು ಹಿಂದೆಲ್ಲಾ ನಿನ್ನೆಯ ಉಳಿದ ಬೆಳ್ತಿಗೆ ಅನ್ನವನ್ನು ಬಳಸಿ ಮಾಡುತ್ತಿದ್ದರು. ಆದರೆ ಈಗೀಗ ವೈವಿಧ್ಯಮಯ ರೈಸ್‌ಬಾತ್‌ ಅಕ್ಕಿ ಲಭ್ಯವಾಗಿರುವುದರಿಂದ ಅಂತಹ ಅಕ್ಕಿಯನ್ನು ಬಳಸಿ ಅನ್ನ ತಯಾರಿಸಿ ಚಿತ್ರಾನ್ನ ಮಾಡಲಾಗುತ್ತದೆ.

ಬೇಕಾಗಿರುವ ಪದಾರ್ಥಗಳು:

ಎಣ್ಣೆ-ನಾಲ್ಕು ಟೀ ಸ್ಪೂನ್‌
ಕಡಲೆಬೀಜ
ಗೋಡಂಬಿ
ಸಾಸಿವೆ
ಉದ್ದಿನಬೇಳೆ
ಕಡಲೇಬೇಳೆ
ಒಣಮೆಣಸು
ಶುಂಠಿ
ಕರಿಬೇವು
ಹಸಿಮೆಣಸಿನಕಾಯಿ
ಅರಿಶಿನ
ಉಪ್ಪು

ಮಾಡುವ ವಿಧಾನ:

ದೊಡ್ಡ ಗಾತ್ರದ ಬಾಣಲೆಯನ್ನು ಸಣ್ಣ ಉರಿಯಲ್ಲಿಡಿ. ನಾಲ್ಕು ಟೀ ಸ್ಪೂನ್‌ ತೆಂಗಿನೆಣ್ಣೆಯನ್ನು ಹಾಕಿ. ಮೂರು ಅಥವಾ ನಾಲ್ಕು ಟೀ ಸ್ಪೂನ್‌ ಹಸಿ ಶೇಂಗಾ, ಅಥವಾ ಕೆಂಪು ಕಡಲೆಕಾಯಿಯನ್ನು ಹಾಕಿ ಎಣ್ಣೆಯಲ್ಲಿ ಹುರಿಯಿರಿ. ಅದು ಅರಳುತ್ತಿದ್ದಂತೆಯೇ ತೆಗೆದಿಟ್ಟುಕೊಳ್ಳಿ. ಗೋಡಂಬಿಯನ್ನು ಹಾಕಿ ಫ್ರೈಮಾಡಿ. ಬ್ರೌನ್‌ ಕಲರ್‌ಗೆ ಬರುವ ತನಕ ಹಾಗೇ ಹುರಿಯಿರಿ. ಈಗ ಗೋಡಂಬಿ ಹಾಗೂ ಕಡಲೆಯನ್ನು ಒಂದು ಬೌಲ್‌ನಲ್ಲಿ ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ. ಬಾಣಲೆಗೆ ಒಂದು ಟೀಸ್ಪೂನ್‌ ಸಾಸಿವೆ, ಒಂದು ಟೀಸ್ಪೂನ್‌ ಉದ್ದಿನಬೇಳೆ, ಒಂದು ಟೀ ಸ್ಪೂಣ್‌ ಕಡಲೆಬೇಳೆ, ಒಣಗಿದ ಮೆಣಸಿನಕಾಯಿ , ಒಂದು ಸಣ್ಣ ತುಂಡು ಶುಂಠಿ, ಕರಿಬೇವಿನೆಲೆ, ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಒಗ್ಗರಣೆಮಾಡಿ. ಅದಕ್ಕೆ ಅರ್ಧ ಟೀ ಸ್ಪೂನ್‌ ಶುದ್ಧ ಅರಶಿನ ಸೇರಿಸಿ. ನಂತರ ಅರ್ಧ ಟೀಸ್ಪೂನ್‌ ಉಪ್ಪು ಸೇರಿಸಿ. ಬೇಯಿಸಿದ ಅನ್ನವನ್ನು ಹಾಕಿ ಸರಿಯಾಗಿ ಮಿಶ್ರ ಮಾಡಿ. ಕೊನೆಯಲ್ಲಿ ಎರಡರಿಂದ ನಾಲ್ಕು ಟೀ ಸ್ಪೂನ್‌ ನಿಂಬೆರಸ ಸೇರಿಸಿ ಮಿಶ್ರಮಾಡಿ. ಕೊತ್ತಂಬರಿ ಸೊಪ್ಪು ಹರವಿ. ರುಚಿ ರುಚಿಯಾದ ನಿಂಬೆ ರೈಸ್‌ ಸೂಪರ್‌ ಆಗಿರುತ್ತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!