ರಾಣಿ ಎಲಿಜಬೆತ್ ಜೀವಿತದ ‌ಕಡೆಯ ದಿನಗಳಲ್ಲಿ ಕ್ಯಾನ್ಸರ್‌ ನೊಂದಿಗೆ ರಹಸ್ಯವಾಗಿ ಹೋರಾಡುತ್ತಿದ್ದರು: ಶಾಂಕಿಂಗ್‌ ವಿಚಾರ ತೆರೆದಿಟ್ಟ ಪುಸ್ತಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಣಿ ಎಲಿಜಬೆತ್ II ತನ್ನ ಜೀವನದ ಕೊನೆಯ ಕೆಲವು ತಿಂಗಳುಗಳಲ್ಲಿ ರಹಸ್ಯವಾಗಿ ‘ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು’ ಎಂದು ಹೊಸ ಜೀವನಚರಿತ್ರೆಯೊಂದು ಹೇಳಿಕೊಂಡಿದೆ.
ಪ್ರಿನ್ಸ್ ಫಿಲಿಪ್ ಅವರ ಸ್ನೇಹಿತ ಗೈಲ್ಸ್ ಬ್ರಾಂಡ್ರೆತ್ ಅವರು ಬರೆದಿರುವ, ಕೆಲವೇ ದಿನಗಳಲ್ಲಿ ಬಿಡುಗಡೆ ಕಾಣಲಿರುವ ರಾಣಿಯ ಜೀವನಚರಿತ್ರೆ ‘ಎಲಿಜಬೆತ್: ಆನ್ ಇಂಟಿಮೇಟ್ ಪೋರ್ಟ್ರೇಟ್’ ನಲ್ಲಿ ದಿವಂಗತ ರಾಣಿಯ ಕುರಿತಾಗಿ ಹಲವು ಕುತೂಹಲಕಾರಿ ವಿಚಾರ ಹೇಳಲಾಗಿದೆ.
ರಾಣಿ ಎಲಿಜಬೆತ್ ರ ಸಾವಿಗೆ ʼವೃದ್ಧಾಪ್ಯʼ ವೇ ಅಧಿಕೃತ ಕಾರಣ ಎಂದು ಹೇಳಲಾಗಿದೆ. ಆದರೆ ಗೈಲ್ಸ್ ಬ್ರಾಂಡ್ರೆತ್ ಹೊಸತೊಂದು ವಿಚಾರವನ್ನು ಹೇಳುತ್ತಿದ್ದಾರೆ. ವಾಸ್ತವವಾಗಿ ರಾಣಿ ಎಲಿಜಬೆತ್ II ರ ಜೀವವನ್ನು ಬಲಿತೆಗೆದುಕೊಂಡಿದ್ದು ಅಪರೂಪದ ಮೂಳೆ ಮಜ್ಜೆಯ ಕ್ಯಾನ್ಸರ್‌ ನ ಎಂದು ಪುಸ್ತಕದಲ್ಲಿ ಉಲ್ಲೇಖಿಲಾಗಿದೆ.
“ರಾಣಿಗೆ ಮೂಳೆ ಮಜ್ಜೆಯ ಕ್ಯಾನ್ಸರ್ (ಮೈಲೋಮಾ) ಇತ್ತು. ಇದು ಅವರಿಗೆ ದಣಿವು ಮತ್ತು ತೂಕ ನಷ್ಟವನ್ನು ತಂದೊಡ್ಡಿತ್ತು. ಅವರ ಜೀವನದ ಕಡೆಯ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಅದು ಕಾಣಿಸಿಕೊಂಡಿತ್ತು” ಎಂದು ಗೈಲ್ಸ್ ಬ್ರಾಂಡ್ರೆತ್ ಹೇಳುತ್ತಾರೆ.
“ಮೈಲೋಮಾ ಸಾಮಾನ್ಯ ಲಕ್ಷಣವೆಂದರೆ ವಿಶೇಷವಾಗಿ ಸೊಂಟ ಮತ್ತು ಕೆಳ ಬೆನ್ನಿನಲ್ಲಿ ಮೂಳೆ ನೋವು. ಮಲ್ಟಿಪಲ್ ಮೈಲೋಮಾವು ವಯಸ್ಸಾದವರ ಮೇಲೆ ಹೆಚ್ಚಾಗಿ ಪರಿಣಾಮ ಬೀರುವ ರೋಗವಾಗಿದೆ. ಪ್ರಸ್ತುತ ಇದಕ್ಕೆ ಚಿಕಿತ್ಸೆ ಇಲ್ಲ, ಆದರೆ ಚಿಕಿತ್ಸೆ – ರೋಗನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಔಷಧಿಗಳು ಮತ್ತು ಮೂಳೆಗಳು ದುರ್ಬಲಗೊಳ್ಳುವುದನ್ನು ತಡೆಯಲು ಸಹಾಯ ಮಾಡುವ ಔಷಧಗಳು ಲಭ್ಯವಿದ್ದು, ಅವುಗಳು ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಬಹುದು ಮತ್ತು ರೋಗಿಯ ಬದುಕುಳಿಯುವಿಕೆಯನ್ನು ತಿಂಗಳುಗಳು ಅಥವಾ ಎರಡು ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ” ಎಂದು ಪುಸ್ತಕ ಹೇಳಿಕೊಂಡಿದೆ.
ಕಳೆದ ವರ್ಷ ಎಪ್ರಿಲ್‌ನಲ್ಲಿ ತನ್ನ ಪತಿ ಫಿಲಿಪ್‌ನ ಮರಣದ ನಂತರ ಹೆಚ್ಚು ಕಾರ್ಯನಿರತರಾಗಿರಲು ನಿರ್ಧರಿಸಿದ್ದೇನೆ ಎಂದು ರಾಣಿ ಸಹಾಯಕರಿಗೆ ಹೇಳುತ್ತಿದ್ದರೂ, ರಾಣಿಯ ದೇಹದಲ್ಲಿ ಕಡಿಮೆ ಶಕ್ತಿಯಿತ್ತು ಎಂದು ಪುಸ್ತಕವು ಹೇಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here