ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಣ್ಣ ಅಭಿನಯದ ಘೋಸ್ಟ್ ಸಿನಿಮಾ ನೋಡಲು ನೂಕುನುಗ್ಗಲು ಉಂಟಾಗಿ ಗಾಂಧಿ ನಗರದಲ್ಲಿರುವ ಸಂತೋಷ್ ಥಿಯೇಟರ್ ಗಾಜು ಪುಡಿ ಪುಡಿಯಾಗಿದೆ.
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ ʻಘೋಸ್ಟ್ʼ ಸಿನಿಮಾ ಇಂದು ಥಿಯೇಟರ್ಗಳಲ್ಲಿ ತೆರೆಕಂಡಿದೆ. ಅಭಿಮಾನಿಗಳಿಗಾಗಿ ನಿನ್ನೆ ನಡುರಾತ್ರಿಯೇ ವಿಶೇಷ ಶೋ ಆಯೋಜನೆ ಮಾಡಲಾಗಿದ್ದು, ಸಿನಿಮಾ ನೋಡಲು ಸಂತೋಷ್ ಥಿಯೇಟರ್ ಬಳಿ ಫ್ಯಾನ್ಸ್ ಕ್ಯೂ ಕಟ್ಟಿದ್ದರು. ಸಿನಿಮಾ ನೋಡಲು ಏಕಾಏಕಿ ಒಳನುಗ್ಗಿದ್ದರಿಂದ ಗಾಜು ಒಡೆದು ಪೀಸ್ ಪೀಸ್ ಆಗಿವೆ.
ಕೆಲವು ಕಾಲ ಥಿಯೇಟರ್ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಪೊಲೀಸ್ ಭದ್ರತೆ ಕೂಡ ಏರ್ಪಡಿಸಲಾಗಿತ್ತು. ಈ ಸಿನಿಮಾದಲ್ಲಿ ಶಿವಣ್ಣ, ಅನುಪಮ್ ಖೇರ್, ಜಯರಾಮ್ ಇತರೆ ಸ್ಟಾರ್ ಕಲಾವಿದರು ನಟಿಸಿದ್ದಾರೆ.