ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಡ್ಡು ಅಂದ್ರೆ ಚಿಕ್ಕಮಕ್ಕಳಿಂದ ಹಿಡಿದು, ವೃದ್ಧರ ವರೆಗೆ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಅದರ ವಿಧಾನ ತುಂಬಾ ಸಮಯ ಅಂತ ತಿಳಿದವರು ಈ ವಿಧಾನವನ್ನು ಫಾಲೋ ಮಾಡಿ, ಉದ್ದಿನ ಬೇಳೆ, ಅಕ್ಕಿ, ಕಡ್ಲೆ ಬೇಳೆ ಏನೂ ಇಲ್ಲದೆ, ಇನ್ಸ್ಟೆಂಟಾಗಿ ಪಡ್ಡು ಮಾಡೋದನ್ನು ನೋಡಿ.
ಬೇಕಾಗುವ ಸಾಮಗ್ರಿ:
ರವೆ-ಒಂದು ಕಪ್
ಮೊಸರು-ಕಾಲು ಕಪ್
ಅವಲಕ್ಕಿ-ಕಾಲು ಕಪ್
ಅಕ್ಕಿ ಹಿಟ್ಟ-ಕಾಲು ಕಪ್
ಕ್ಯಾರೆಟ್, ಈರುಳ್ಳಿ, ಮೆಣಸಿನಕಾಯಿ,
ಹಸಿತೆಂಗಿನಕಾಯಿ, ಶುಂಠಿ, ಉಪ್ಪು
ಮಾಡುವ ವಿಧಾನ:
ರವೆಯನ್ನು ಹಾಗೂ ಅವಲಕ್ಕಿಯನನು ಹತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ನೀರನ್ನು ಹೊರಚೆಲ್ಲಿ ರವೆ, ಅವಲಕ್ಕಿ, ಅಕ್ಕಿ ಹಿಟ್ಟು, ಮೊಸರನ್ನು ಚೆನಾಗಿ ಮಿಕ್ಸಿ ಮಾಡಿ ಒಂದು ಬಟ್ಟಲಿಗೆ ಹಾಕಿ. ಮೇಲೆ ನೀಡಿದ ಎಲ್ಲಾ ತರಕಾರಿಯನ್ನು ಹಿಟ್ಟನೊಳಗೆ ಸೇರಿಸಿ ಮಿಶ್ರಣ ಮಾಡಿ, ರುಚಿಗೆ ತಕ್ಷ್ಟು ಉಪ್ಪು ಹಾಕಿ ಹಿಟ್ಟು ತಯಾರಿಸಿ. ಒಲೆ ಮೇಲೆ ಪಡ್ಡು ತಯಾರಿಸುವ ಎಂಚಿಟ್ಟು ಅದಕ್ಕೆ ಎಣ್ಣೆ ಸವರಿ ಮಿಶ್ರಣ ಮಾಡಿದ ಹಿಟ್ಟು ಸುರಿದು ಎರಡೂ ಬದಿ ಬೇಯಿಸಿದರೆ ಪಡ್ಡು ರೆಡಿ.