Monday, July 4, 2022

Latest Posts

ಬಸವಕಲ್ಯಾಣ: ಮುಂಗಾರು ಬಿತ್ತನೆಗೆ ಬೀಜ- ಗೊಬ್ಬರದ ಕೊರತೆಯಾಗದಂತೆ ಗಮನಹರಿಸಲು ಶಾಸಕ ಸೂಚನೆ

ಹೊಸದಿಗಂತ ವರದಿ, ಬಸವಕಲ್ಯಾಣ:
ಪ್ರಸ್ತುತ ಮುಂಗಾರು ಬಿತ್ತನೆ ಸಮಿಪಿಸಿದ್ದು, ರೈತರಿಗೆ ಬೇಕಾದ ಗೊಬ್ಬರ ಹಾಗೂ ಬೀಜಗಳು ಕೊರತೆ ಆಗದಂತೆ ಸಂಗ್ರಹ ಮಾಡಿಟ್ಟಕೊಳ್ಳಬೇಕೆಂದು ಶಾಸಕ ಶರಣು ಸಲಗರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಹಾಗೂ ಮುಂಗಾರು ಹಂಗಾಮಿನ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ಪ್ರತಿವರ್ಷ ಬೀಜ ವಿತರಣೆ ಮಾಡುವ ಸಂದರ್ಭದಲ್ಲಿ ರೈತರಿಂದ ಒಂದಲ್ಲಾ ಒಂದು ದೂರುಗಳು ಬರುತ್ತಿವೆ. ದೂರು ಬಾರದ ಹಾಗೆ ಅಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಈ ವರ್ಷ ರೈತರಿಂದ ಯಾವುದೇ ದೂರು ಬರದಂತೆ ಮುಂಜಾಗೃತೆವಾಗಿ ಎಲ್ಲವೂ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಬೀಜ ವಿತರಣೆ ಮಾಡಲು ಸಮಸ್ಯೆವಾಗುತ್ತಿದೆ ಎಂಬ ಮಾಹಿತಿ ಅಕಾರಿಗಳು ಸಭೆಯ ಗಮನಕ್ಕೆ ತಂದಿದ್ದಾರೆ, ಹೀಗಾಗಿ ಬೀಜ ವಿತರಣೆ ಮುಗಿಯುವವರೆಗೂ ತಾಲೂಕಿನ ವಿವಿಧ ಇಲಾಖೆ ಒಬ್ಬ ಸಿಬ್ಬಂದಿಯನ್ನು ಬೀಜ ವಿತರಣೆ ಕೇಂದ್ರಕ್ಕೆ ನಿಯೋಜಿಸಬೇಕು. ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿಗಳ ಪಟ್ಟಿಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ನಂತರ ಅಬಕಾರಿ, ಪ.ಪಂ.ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಹಿರಿಯ ತೋಟಗಾರಿಕೆ, ಪಶುಸಂಗೋಪನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಮಾಹಿತಿ ಪಡೆದುಕೊಂಡು ಬಾಕಿ ಇರುವ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಸಂಬಂಧ ಪಟ್ಟ ಅಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸಾವಿತ್ರಿ ಶರಣು ಸಲಗರ, ಬಸವಕಲ್ಯಾಣ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಕಾರಿ ಕಿರಣ ಪಾಟೀಲ್, ಹುಲಸೂರ ಇಓ ಮಹಾದೇವ ಜಮ್ಮು, ತಾ.ಪಂ.ಎಡಿ (ಪಂ.ರಾ) ಅರುಣಕುಮಾರ ಪಾಟೀಲ್, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಮಾರ್ತಂಡ ಎನ್. ಬಸವಕಲ್ಯಾಣ ಕೃಷಿ ಸಮಾಜ ಅಧ್ಯಕ್ಷ ಬಾಬುರೆಡ್ಡಿ ನಿರಗೂಡಿ, ಕೆಡಿಪಿ ಸದಸ್ಯರಾದ ಅಲ್ಕಾವತಿ ಬಿರಾದಾರ್, ರಾಜು ಆಲಗೂಡ, ಬಸವರಾಜ ಹಿರೇಮಠ, ವೀರಣ್ಣಾ ಹಲಗೆ, ವೀರಶೆಟ್ಟಿ ಗೌರೆ, ಜಬ್ಬರ ಸೌಧಾಗಾರ್ ಸೇರಿದಂತೆ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss