ಕುತುಬ್‌ ಮೀನಾರ್‌ ಹಿಂದೂಗಳದ್ದು, ಪೂಜೆಗೆ ಅವಕಾಶ ನೀಡಿ ವಿಹೆಚ್‌ಪಿ ನಾಯಕ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಪ್ರತಿರೂಪದ ಕುತುಬ್‌ ಮೀನಾರ್‌ ಚರ್ಚೆ ಮುನ್ನೆಲೆಗೆ ಬಂದಿದೆ. ದೆಹಲಿಯ ಮೆಹ್ರೌಲಿಯಲ್ಲಿರುವ ಕುತುಬ್ ಕಾಂಪ್ಲೆಕ್ಸ್‌ನಲ್ಲಿರುವ ಕುತುಬ್ ಮಿನಾರ್ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇಂತಹ ಕುತುಬ್ ಮಿನಾರ್ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ವಿಹೆಚ್‌ಪಿ ನಾಯಕ ವಿನೋದ್ ಬನ್ಸಾಲ್, ಕುತುಬ್ ಮಿನಾರ್ ಅನ್ನು ವಿಷ್ಣು ದೇವಾಲಯದ ಮೇಲೆ ನಿರ್ಮಿಸಲಾಗಿದೆ ಆದ್ದರಿಂದ ಇದು ವಿಷ್ಣುವಿನ ಸ್ತಂಭ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವಿಷ್ಣುಸ್ತಂಭವನ್ನು ರಾಜಾ ವಿಕ್ರಮಾದಿತ್ಯ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು. ಕಾಲಕ್ರಮೇಣ ಸ್ತಂಭದ ಕೆಲವು ಭಾಗಗಳನ್ನು ಮುಸ್ಲಿಂ ಆಡಳಿತಗಾರರೊಬ್ಬರು ಪುನರ್ನಿರ್ಮಾಣ ಮಾಡಿ ಅದಕ್ಕೆ ಕುವಾತ್-ಉಲ್-ಇಸ್ಲಾಂ ಎಂದು ಮರುನಾಮಕರಣ ಎಂಬ ಮಾತನ್ನು ಹೇಳಿದ್ದಾರೆ. ಕುತುಬ್ ಮೀನಾರ್ ಕಾಂಪ್ಲೆಕ್ಸ್‌ನಲ್ಲಿರುವ ಪುರಾತನ ದೇವಾಲಯಗಳನ್ನು ಪುನರ್‌ ನಿರ್ಮಿಸಬೇಕು ಮತ್ತು ಅಲ್ಲಿ ಹಿಂದೂ ಧಾರ್ಮಿಕ ವಿಧಿಗಳು ಮತ್ತು ಪ್ರಾರ್ಥನೆಗಳನ್ನು ಪುನರಾರಂಭಿಸಬೇಕು ಎಂದು ವಿಹೆಚ್‌ಪಿ ನಾಯಕ ಒತ್ತಾಯ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!