ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಟಿ ಮೇಘಾ ಶೆಟ್ಟಿ ಬಾಲಿವುಡ್ ಫೇಮಸ್ ನಟ ಆರ್. ಮಾಧವನ್ ಅವರನ್ನು ಭೇಟಿ ಮಾಡಿದ್ದಾರೆ.
ಆ ಸಂದರ್ಭದಲ್ಲಿ ತೆಗೆದ ಸೆಲ್ಫಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ಸದ್ಯ ವೈರಲ್ ಆಗಿದ್ದು, ಯಾವ ಪ್ರಾಜೆಕ್ಟ್ ಎಂದು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.
ಅದ್ಭುತ ನಟನೊಂದಿಗೆ ಚರ್ಚೆ ಮಾಡುತ್ತಾ ಸಮಯ ಕಳೆದೆ. ಒಂದೊಳ್ಳೆಯ ಕಲಿಕೆಯ ಅನುಭವ ಎಂದು ಮೇಘಾ ಶೆಟ್ಟಿ ಬರೆದುಕೊಂಡಿದ್ದಾರೆ. ಮೇಘಾ ಶೆಟ್ಟಿ ಅವರು ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಸದ್ಯ ಹಿರಿತೆರೆಯಲ್ಲಿ ಬ್ಯುಸಿ ಆಗಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಹಲವು ಆಫರ್ಗಳು ಬರುತ್ತಿವೆ.