ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್. ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡದ ಸ್ಟಾರ್ ಬೌಲರ್ ಟಿಮ್ ಸೌಥಿ ತಮ್ಮ 16 ವರ್ಷಗಳ ಟೆಸ್ಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮಧ್ಯೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಿತು. ಈ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-1 ಅಂತರದಲ್ಲಿ ಗೆದ್ದು ಬೀಗಿದೆ. ಹ್ಯಾಮಿಲ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟಿಮ್ ಸೌಥಿ ತಮ್ಮ ಕೊನೆಯ ಟೆಸ್ಟ್ ಆಡಿದರು.
ಟಿಮ್ ಸೌಥಿ ನ್ಯೂಜಿಲೆಂಡ್ ಪರ 2008ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈಗ ಅದೇ ತಂಡದ ವಿರುದ್ಧ ಕೊನೆಯ ಟೆಸ್ಟ್ ಆಡಿ ನಿವೃತ್ತಿಯಾಗಿದ್ದು ವಿಶೇಷ.
ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಟಿಮ್ ಸೌಥಿ 107 ಟೆಸ್ಟ್ ಪಂದ್ಯಗಳಲ್ಲಿ 30.26 ಸರಾಸರಿ ಜತೆಗೆ 391 ವಿಕೆಟ್ ಕಬಳಿಸಿದ್ದಾರೆ. 2245 ರನ್ ಕಲೆ ಹಾಕಿರುವ ಇವರು 7 ಅರ್ಧಶತಕ ಬಾರಿಸಿದ್ದಾರೆ. 161 ಏಕದಿನ ಪಂದ್ಯಗಳಲ್ಲಿ 221 ವಿಕೆಟ್ ಪಡೆದರೆ, 125 ಟಿ20 ಪಂದ್ಯಗಳಲ್ಲಿ 164 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸೌಥಿ ಕೂಡ 54 ಐಪಿಎಲ್ ಪಂದ್ಯ ಆಡಿದ್ದು, 47 ವಿಕೆಟ್ ಪಡೆದಿದ್ದಾರೆ.