September 10, 2026
Thursday, September 10, 2026
spot_img

ಪ್ರಧಾನಿ ಮೋದಿ ಮನವಿಗೆ ಆರ್. ಅಶೋಕ್ ಸ್ಪಂದನೆ: ವಾರದಲ್ಲಿ ಮೂರು ದಿನ ಬೆಂಗಾವಲು ವಾಹನಕ್ಕೆ ಬ್ರೇಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ದೇಶದಲ್ಲಿ ಇಂಧನ ಕೊರತೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ತೈಲವನ್ನು ಮಿತವಾಗಿ ಬಳಸುವಂತೆ ಕಡೆ ನೀಡಿದ್ದ ಪ್ರಧಾನಿ ಮೋದಿ ಅವರ ಮನವಿಗೆ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕೂಡ ಸ್ಪಂದಿಸಿದ್ದಾರೆ.

ಮೋದಿ ಅವರ ಕರೆಗೆ ಬೆಲೆ ನೀಡಿದ ಅಶೋಕ್ ಅವರು, ಇನ್ಮುಂದೆ ವಾರದಲ್ಲಿ ಮೂರು ದಿನಗಳ ಕಾಲ ತಮ್ಮ ಬೆಂಗಾವಲು ವಾಹನಗಳನ್ನು ಬಳಸದಿರಲು ತೀರ್ಮಾನಿಸಿದ್ದಾರೆ.

ಬೆಂಗಳೂರಿನಲ್ಲಿ ಸಂಚರಿಸುವ ವೇಳೆ ವಾರದ ಮೂರು ದಿನಗಳು ಯಾವುದೇ ಎಸ್ಕಾರ್ಟ್ ವಾಹನಗಳಿಲ್ಲದೆ ಸಾಮಾನ್ಯರಂತೆ ಪ್ರಯಾಣಿಸಲು ನಿರ್ದರಿಸಿದ್ದಾರೆ. ಈ ಮೂಲಕ ಅನಗತ್ಯ ಇಂಧನ ವ್ಯಯಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳ ಜೊತೆ ಖಾಸಗಿ ಕಾರ್ಯಕ್ರಮಗಳಿಗೆ ಬೆಂಗಾವಲು ಪಡೆಯನ್ನು ಬಳಸದಿರಲು ನಿರ್ಧರಿಸಿದ್ದು, ಅಶೋಕ್ ಈ ನಡೆ ರಾಜಕೀಯ ವಲಯದಲ್ಲಿ ಹೊಸ ಬದಲಾವಣೆಗೆ ಮುನ್ನುಡಿಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !