ಮತ್ತೆ ಜನಾಂಗೀಯ ನಿಂದನೆ ಕೂಗು: ಭಾರತೀಯ ಅಭಿಮಾನಿಗಳಿಗೆ ಇಂಗ್ಲೆಂಡ್​ ನಲ್ಲಿ ಅವಮಾನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮೈದಾನದಲ್ಲಿ ಇಂಗ್ಲೆಂಡ್​ನ ಜಾನಿ ಬೈರ್​ಸ್ಟೋವ್​ ಮತ್ತು ವಿರಾಟ್​ ಕೊಹ್ಲಿ ಕಿತ್ತಾಡಿಕೊಂಡಿದ್ದರೆ, ಇತ್ತಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತೀಯ ಅಭಿಮಾನಿಗಳ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪ ಕೇಳಿ ಬಂದಿದೆ.

ಹೌದು, ಈ ಕುರಿತು ಟ್ವಿಟ್ಟರ್​ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹರಿದಾಡುತ್ತಿದ್ದು, 10 ಜನರು ತಮ್ಮನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ತನಿಖೆ ನಡೆಸಿ, ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆರೋಪ ಕೇಳಿ ಬಂದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್​ ಹಾಗೂ ವೇಲ್ಸ್​ ಕ್ರಿಕೆಟ್​ ಮಂಡಳಿ, ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಜನಾಂಗೀಯ ನಿಂದನೆ ಆರೋಪದ ಬಗ್ಗೆ ಕಳವಳಗೊಂಡಿದ್ದೇವೆ. ಈ ರೀತಿಯ ನಡವಳಿಕೆಗೆ ನಮ್ಮಲ್ಲಿ ಜಾಗವಿಲ್ಲ. ಅತ್ಯಂತ ಸುರಕ್ಷಿತ ವಾತಾವರಣಕ್ಕಾಗಿ ಎಡ್ಜ್​ಬಾಸ್ಟನ್​ ಕೆಲಸ ಮಾಡಲಿದೆ ಎಂದು ತಿಳಿಸಿದೆ.

ಎಡ್ಜ್‌ಬಾಸ್ಟನ್‌ ಸ್ಟೇಡಿಯಂನ 22ನೇ ಬ್ಲಾಕ್​ನಲ್ಲಿ ಕೆಲ ಇಂಗ್ಲೆಂಡ್​ ಆಟಗಾರರು ಭಾರತೀಯರನ್ನು ಉದ್ದೇಶಿಸಿ ಅತ್ಯಂತ ಕಟುವಾಗಿ ಜನಾಂಗೀಯ ನಿಂದನೆ ಮಾಡಿದರು. 10 ನಿಮಿಷ ಹೀಗೆಯೇ ಮೂದಲಿಸಿದರು. ಈ ಬಗ್ಗೆ ಸ್ಟೇಡಿಯಂ ಸಿಬ್ಬಂದಿಗೆ ದೂರು ನೀಡಿದರೂ, ನಮ್ಮನ್ನೇ ಆಸನಗಳಲ್ಲಿ ಕೂರಲು ತಿಳಿಸಿದರು ಎಂದು ಭಾರತದ ಅಭಿಮಾನಿಯೊಬ್ಬರು ಟ್ವೀಟ್​ ಮಾಡಿದ್ದಾರೆ.
ಕ್ರೀಡಾಂಗಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಆತಂಕವಿದೆ. ಇಂತಹ ಘಟನೆ ಸಮಾಜದಲ್ಲಿ ಸ್ವೀಕಾರಾರ್ಹವಲ್ಲಎಂದು ಇನ್ನೊಬ್ಬ ಅಭಿಮಾನಿ ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!