ಹೊಸದಿಗಂತ ಡಿಜಿಟಲ್ ಡೆಸ್ಕ್: :
ಆಸ್ಟ್ರೇಲಿಯಾದ ಜೀಲಾಂಗ್‌ನಲ್ಲಿ ಭಾರತೀಯ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಮೇಲೆ ದಾಳಿ ನಡೆದಿದೆ.
ಜೀಲಾಂಗ್ ಎಂಬ ನಗರದ ಸಮೀಪವಿರುವ ಕೊರಿಯೊ ಎಂಬಲ್ಲಿ ಭಾರತೀಯ ಮೂಲದ 22 ವರ್ಷದ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಜಿಮ್‌ನಲ್ಲಿ ವರ್ಕೌಟ್ ಮುಗಿಸಿ ಹೊರಬರುವಾಗ ಈ ಘಟನೆ ಸಂಭವಿಸಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮೂವರು ವ್ಯಕ್ತಿಗಳ ಗುಂಪು ಹರ್ಮನ್ ಅವರ ಮೇಲೆ ಹಲ್ಲೆ ನಡೆಸಿದ್ದು, ಹರ್ಮನ್ ಅವರನ್ನು “ಇಂಡಿಯನ್ ಡಾಗ್” (ಭಾರತೀಯ ನಾಯಿ) ಎಂದು ಜನಾಂಗೀಯವಾಗಿ ನಿಂದಿಸಿದ್ದಾರೆ .
ಹರ್ಮನ್ ಅವರ ಮುಖಕ್ಕೆ ತಲೆಗೆ ಜೋರಾಗಿ ಗುದ್ದಿದ್ದು, ಇದ್ರ ಪರಿಣಾಮ ಮೂಗಿನಿಂದ ರಕ್ತಸ್ರಾವವಾಗಿದೆ . ಹೀಗಾಗಿ ಹರ್ಮನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.



