September 29, 2026
Tuesday, September 29, 2026
spot_img

ಪಲ್ಯ, ಗ್ರೇವಿ & More 12 | ಸ್ವಲ್ಪವೂ ಕಹಿ ಆಗದಂತೆ ಮಾಡಬಹುದು ಹಾಗಲಕಾಯಿ ಪಲ್ಯ, ಹೇಗೆ ನೋಡಿ..

ಸಾಮಾಗ್ರಿಗಳು
ಹಾಗಲಕಾಯಿ
ಈರುಳ್ಳಿ
ಟೊಮ್ಯಾಟೊ
ಕಾಯಿ
ಬೆಳ್ಳುಳ್ಳಿ
ಸಾಂಬಾರ್‌ ಪುಡಿ
ಕೊತ್ತಂಬರಿ ಸೊಪ್ಪು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ

ಮಾಡುವ ವಿಧಾನ
ಮಿಕ್ಸಿಯಲ್ಲಿ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಪುಡಿ ಹಾಕಿ ರುಬ್ಬಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಗೂ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ, ಆಮೇಲೆ ಹಾಗಲಕಾಯಿ, ಉಪ್ಪು ಹಾಕಿ ಬಾಡಿಸಿ
ಸ್ವಲ್ಪ ಹುಣಸೆರಸ, ಸ್ವಲ್ಪ ಬೆಲ್ಲ ಹಾಕಿ ಡ್ರೈ ರೋಸ್ಟ್‌ ಮಾಡಿ
ನಂತರ ಮಿಕ್ಸಿಯ ಕಾಯಿತುರಿ ಹಾಕಿ ಒಂದೆರಡು ನಿಮಿಷ ಬಾಡಿಸಿ ರುಚಿಯಾದ ಪಲ್ಯ ತಿನ್ನಿ

Must Read