ಪೋಲೆಂಡ್‌ ನಲ್ಲಿ ಭಾರತೀಯನ ಮೇಲೆ ಅಮೆರಿಕ ಪ್ರವಾಸಿಗನಿಂದ ಜನಾಂಗೀಯ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಅಮೆರಿಕದಲ್ಲಿ ಬಾರತೀಯರ ಮೇಲೆ ಒಂದಾದ ಮೇಲೊಂದರಂತೆ ಜನಾಂಗೀಯ ದಾಳಿ ನಡೆಯುತ್ತಿರುವ ಬೆನ್ನಲ್ಲೇ, ಪೋಲಂಡ್‌ ರಾಜಧಾನಿ ವಾರ್ಸಾದಲ್ಲಿ ಭಾರತೀಯರೊಬ್ಬರ ವಿರುದ್ಧ ಅಮೆರಿಕನ್‌ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆ ಮಾಡುತ್ತಿರುವ ವಿಡಿಯೋವೊಂದು ಕಾಣಿಸಿಕೊಂಡಿದೆ.

ಈ ವಿಡಿಯೋದಲ್ಲಿ ಬಿಳಿಯ ಅಮೆರಿಕನ್‌ ಪ್ರವಾಸಿಯೊಬ್ಬ ಪೋಲಂಡ್‌ ನಲ್ಲಿ ಅನುಮತಿಯಿಲ್ಲದೇ ಭಾರತೀಯ ವ್ಯಕ್ತಿಯೊಬ್ಬನನ್ನು ಚಿತ್ರೀಕರಿಸಲು ಪ್ರಾರಂಭಿಸುತ್ತಾನೆ ಮತ್ತು ವಿಡಿಯೋದಲ್ಲಿ ಭಾರತೀಯ ವ್ಯಕ್ತಿಯ ಬಳಿ ಜನಾಂಗೀಯ ಪ್ರೇರಿತ ಪ್ರಶ್ನೆಗಳನ್ನು ಕೇಳುತ್ತ ಅವನಿಗೆ ಕಿರುಕುಳ ನೀಡುತ್ತಾನೆ.

ಚಿತ್ರೀಕರಿಸಲ್ಪಟ್ಟ ವ್ಯಕ್ತಿಯು ತನ್ನ ಒಪ್ಪಿಗೆಯಿಲ್ಲದೆ ಏಕೆ ಚಿತ್ರೀಕರಿಸಲಾಗುತ್ತಿದೆ ಎಂದು ಚಿತ್ರೀಕರಣವನ್ನು ನಿಲ್ಲಿಸಲು ಹೇಳುತ್ತಾನೆ, ಆದರೆ ಇನ್ನೊಬ್ಬ ವ್ಯಕ್ತಿಯು ಚಿತ್ತರೀಕರಣವನ್ನು ಮುಂದುವರಿಸುತ್ತಾನೆ. ಭಾರತೀಯ ವ್ಯಕ್ತಿಗೆ ಪರಾವಲಂಬಿ ಎಂಬಿತ್ಯಾದಿ ಕೆಟ್ಟ ಕೆಟ್ಟದಾಗಿ ಆತ ನಿಂದಿಸುತ್ತಾನೆ.

“ಅಮೆರಿಕದಲ್ಲಿ, ನಿಮ್ಮಲ್ಲಿ ತುಂಬಾ ಮಂದಿ ಇದ್ದಾರೆ. ನೀವು ಪೋಲೆಂಡ್‌ನಲ್ಲಿ ಏಕೆ ಇದ್ದೀರಿ? ನೀವು ಪೋಲೆಂಡ್ ಅನ್ನು ಆಕ್ರಮಿಸಬಹುದು ಎಂದು ನೀವು ಭಾವಿಸುತ್ತೀರಾ? ನಿಮಗೆ ನಿಮ್ಮದೇ ಆದ ದೇಶವಿದೆ, ನೀವು ಏಕೆ ಹಿಂತಿರುಗಬಾರದು, ”ಎಂದು ಕ್ಯಾಮೆರಾದ ಹಿಂದಿನ ವ್ಯಕ್ತಿ ಹೇಳುತ್ತಾನೆ. ಅದಕ್ಕೆ ಭಾರತೀಯ ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ ಆ ವ್ಯಕತಿ ಭಾರತೀಯನನ್ನು ಹಿಂಬಾಲಿಸುತ್ತಲೇ ಇರುತ್ತಾನೆ. ಭಾರತೀಯ ವ್ಯಕ್ತಿ ಬಿಳಿಯರ ಭೂಮಿಗೆ ಏಕೆ ಬಂದಿದ್ದಾನೆ ಎಂದು ಪ್ರಶ್ನಿಸುತ್ತಾನೆ.

“ನೀವು ಏಕೆ ಪರಾವಲಂಬಿಯಾಗಿದ್ದೀರಿ? ನೀವು ನಮ್ಮ ಜನಾಂಗವನ್ನು ನರಮೇಧ ಮಾಡುತ್ತಿದ್ದೀರಿ. ನೀವು ಆಕ್ರಮಣಕಾರರು. ಮನೆಗೆ ಹೋಗು, ಆಕ್ರಮಣಕಾರ. ನೀವು ಯುರೋಪ್‌ನಲ್ಲಿ ಇರುವುದು ನಮಗೆ ಬೇಡ” ಎಂದು ಅಮೆರಿಕದ ಪ್ರವಾಸಿ ನಿಂದಿಸುತ್ತಿರುವ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!